Uncategorized

ಸಿಂಪಲ್, ಕ್ಯೂಟ್ ಕಿರುತೆರೆ ನಟಿ ಸಿರಿ ಬಿಗ್‌ ಬಾಸ್‌ ಬಗ್ಗೆ ಹೇಳಿದ್ದೇನು? ಉಡುಪು ಮತ್ತು ಸಂಭಾವನೆ ಬಗೆಗಿನ ಪ್ರಶ್ನೆಗೆ ಏನೆಂದು ಉತ್ತರಿಸಿದ್ದಾರೆ ಗೊತ್ತಾ?

ನ್ಯೂಸ್ ನಾಟೌಟ್ : ಈ ಬಾರಿ ಬಿಗ್‌ ಬಾಸ್‌ ಕಾರ್ಯಕ್ರಮ ಕುತೂಹಲವನ್ನು ಕೆರಳಿಸುವಂತೆ ಮಾಡಿದೆ.ಇದರಲ್ಲಿ ಸಿರಿ ಎಂಬುವವರ ಕ್ಯಾರೆಕ್ಟರ್ ಅನ್ನು ತುಂಬಾ ಜನ ಇಷ್ಟ ಪಟ್ಟಿದ್ರು. ಸಿಂಪಲ್ ಮತ್ತು ಕ್ಯೂಟ್ ಆಗಿ ಕಾಣಿಸಿಕೊಂಡ ಕಿರುತೆರೆ ನಟಿ ಸಿರಿ.  3 ತಿಂಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದರು. ಹೀಗಾಗಿ ಅವರ ಉಡುಪು ಮತ್ತು ಸಂಭಾವನೆ ಬಗ್ಗೆ ಪ್ರಶ್ನೆ ಮಾಡಲಾಗಿತ್ತು.ಇದೀಗ ಅದಕ್ಕೆ ಸಿರಿಯವರು ಉತ್ತರ ನೀಡಿದ್ದಾರೆ.

ಬಿಗ್ ಬಾಸ್ ಹೋಗುವ ಮುನ್ನ ಅಕ್ಕ ಮತ್ತು ಅಕ್ಕನ ಮಗಳು ಹಾಗೂ ಸ್ನೇಹಿತ ಪ್ರಭಾಕರ್‌ ಅವರು ನನ್ನ ವಸ್ತ್ರಗಳನ್ನು ಸೆಲೆಕ್ಟ್‌ ಮತ್ತು ಡಿಸೈನ್ ಮಾಡುವ ಜವಾಬ್ದಾರಿ ಹೊತ್ತಿದ್ದರು. ನನ್ನ ಆನ್‌ಸ್ಕ್ರೀನ್‌ ಉಡುಪುಗಳ ಕ್ರೆಡಿಟ್‌ ಅವರಿಗೆ ಹೋಗಬೇಕು. ನಾನು ಕೇಳಿದ ಪ್ಯಾಟರ್ನ್‌ಗಳಲ್ಲಿ ಡಿಸೈನರ್‌ಗಳು ಮಾಡಿಕೊಟ್ಟರು ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಸಿರಿ ಮಾತನಾಡಿದ್ದಾರೆ.ಇನ್ನು ನಾನು ಪಡೆದಿರುವ ಸಂಭಾವನೆ ವಿಚಾರವನ್ನು ರಿವೀಲ್ ಮಾಡುವಂತಿಲ್ಲ. ಸಂಭಾವನೆ ಲೆಕ್ಕಾಚಾರ ಮಾಡಿ ಬಿಗ್ ಬಾಸ್‌ ಮನೆಗೆ ಕಾಲಿಟ್ಟಿಲ್ಲ.ಒಂದು ದೊಡ್ಡ ಪ್ರಾಜೆಕ್ಟ್‌ ಮುಗಿಸಿಕೊಂಡು ಒಂದು ತಿಂಗಳ ಬ್ರೇಕ್‌ನಲ್ಲಿ ಇದ್ದೆ ಎಂದರು.

ಅದೇ ಸಮಯದಲ್ಲಿ ಮತ್ತೊಂದು ಪ್ರಾಜೆಕ್ಟ್‌ ಬಂತು ನವೆಂಬರ್‌ ತಿಂಗಳಿನಲ್ಲಿ ಶುರು ಮಾಡಬೇಕಿತ್ತು.ಬಿಗ್ ಬಾಸ್‌ ಆಫರ್‌ ಬಂದಾಗ ಬೇಡ ಅಂತ ಹೇಳಲು ಮನಸ್ಸು ಬರಲಿಲ್ಲ. ಸಮಯ ತೆಗೆದುಕೊಂಡು ಯೋಚನೆ ಮಾಡಿ ಒಪ್ಪಿಕೊಂಡೆ ಎಂದು ಸಿರಿ ಹೇಳಿದ್ದಾರೆ.ಸೀರಿಯಲ್ ಹೊರತು ಪಡಿಸಿ ನಾನು ಯಾವ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿರಲಿಲ್ಲ. ಜನರಿಗೆ ಹತ್ತಿರ ಆಗಬೇಕು. ಹೀಗಾಗಿ ಹಣ ಮುಖ್ಯವಾಗಲಿಲ್ಲ.ಬಿಗ್ ಬಾಸ್ ಜರ್ನಿ ನನಗೆ ದೊಡ್ಡ ಅನುಭವ ಕೊಟ್ಟಿದೆ. ಮೂರು ತಿಂಗಳು ಅಲ್ಲಿ ಇರುತ್ತೀನಿ ಅಂದುಕೊಂಡಿರಲಿಲ್ಲ ಹೀಗಾಗಿ ಹಣ ರಿವೀಲ್ ಮಾಡೋದಿಲ್ಲ ಎಂದು ಹೇಳಿದ್ದಾರೆ.   

Related posts

ಇಚ್ಲಂಪಾಡಿಯಲ್ಲಿ ನೀರಿಗೆ ಬೆರೆತ ರಾಸಾಯನಿಕ ಪದಾರ್ಥ:ನೂರಾರು ಜಲಚರಗಳ ಮಾರಣಹೋಮ

ಮಹಾರಾಷ್ಟ್ರ ಕಿರಿಕ್ ಮಾಡಿದ್ರೆ ಈ ಹಳ್ಳಿಗಳೆಲ್ಲ ಕರ್ನಾಟಕದ ಪಾಲು..!

ಉಗ್ರರ ಗುಂಡಿನ ದಾಳಿಗೆ ಭಾರತೀಯ ಸೈನ್ಯದ ಶ್ವಾನ ಬಲಿ