Latestದೇಶ-ವಿದೇಶವೈರಲ್ ನ್ಯೂಸ್

ಉದ್ಘಾಟನೆಯಾಗುತ್ತಿದ್ದಂತೆ ಸಮಯ ತೋರಿಸುವುದನ್ನೇ ನಿಲ್ಲಿಸಿದ ಗಡಿಯಾರ ಗೋಪುರ..? ಕಳಪೆ ಕಾಮಗಾರಿ ಆರೋಪ..!

486

ನ್ಯೂಸ್ ನಾಟೌಟ್: ಬಿಹಾರದ ಬಿಹಾರ್ ಶರೀಫ್‌ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಸ್ಮಾರ್ಟ್ ಸಿಟಿಯಲ್ಲಿ ನಿರ್ಮಿಸಲಾಗಿರುವ ಗಡಿಯಾರ ಗೋಪುರವು ಉದ್ಘಾಟನೆಗೊಂಡ ಬೆನ್ನಿಗೇ, ಸಮಯ ತೋರಿಸುವುದನ್ನು ನಿಲ್ಲಿಸಿದ ಘಟನೆ ನಡೆದಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಹರಡಿದ್ದು, ಇದಕ್ಕೆ ಕಳಪೆ ಕಾಮಗಾರಿ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ‌.

“ಈ ಯೋಜನೆ ಇನ್ನೂ ಅಪೂರ್ಣವಾಗಿದ್ದು, ಹಾಲಿ ಗೋಪುರವೇ ಅಂತಿಮ ವಿನ್ಯಾಸವಲ್ಲ” ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಉದ್ಘಾಟನೆಗೊಂಡ ಕೇವಲ 24 ಗಂಟೆಗಳಲ್ಲಿ ಗಡಿಯಾರ ಗೋಪುರವು ಸಮಯ ತೋರಿಸುವುದನ್ನು ನಿಲ್ಲಿಸಿದೆ ಎಂದು ಕಳೆದ ವಾರಾಂತ್ಯದಲ್ಲಿ ಆರೋಪಿಸಿದ್ದ ಸಾಮಾಜಿಕ ಮಾಧ್ಯಮ ಪೋಸ್ಟ್‌ ಗಳು, ನಿರ್ಮಾಣ ಕಾಮಗಾರಿಯ ಗುಣಮಟ್ಟದ ಕುರಿತು ಟೀಕೆಗಳನ್ನೂ ವ್ಯಕ್ತಪಡಿಸಿದ್ದವು.

ಆದರೆ, ಈ ವದಂತಿಗಳು ಸುಳ್ಳು ಎಂದು ಮಹಾನಗರ ಪಾಲಿಕೆ ಆಯುಕ್ತ ದೀಪಕ್ ಕುಮಾರ್ ಮಿಶ್ರಾ ಸ್ಪಷ್ಟನೆ ನೀಡಿದ್ದಾರೆ.

“ಯೋಜನೆಯು ಪ್ರಗತಿಯಲ್ಲಿರುವುದರಿಂದ, ಗಡಿಯಾರ ಗೋಪುರವನ್ನು ಇನ್ನೂ ಉದ್ಘಾಟಿಸಿಲ್ಲ. ಪ್ರಗತಿ ಯಾತ್ರೆಯ ವೇಳೆ ಕೆಲ ಕಾಲ ಗಡಿಯಾರಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಕೆಲ ದಿನಗಳ ನಂತರ ಕೆಲವು ಅಪರಿಚಿತ ದುಷ್ಕರ್ಮಿಗಳು ಅದರ ಕೇಬಲ್ ಕಳವು ಮಾಡಿದ್ದರಿಂದಾಗಿ, ಅದು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ. ಅದನ್ನು ಸರಿಪಡಿಸಬೇಕಿದೆ”, ಎಂದು ತಿಳಿಸಿದ್ದಾರೆ.

ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಗೆ ವೇಳಾಪಟ್ಟಿ ಬಿಡುಗಡೆ, ಇಲ್ಲಿದೆ ಸಂಪೂರ್ಣ ಮಾಹಿತಿ

ಸರ್ಕಾರಿ ಉದ್ಯೋಗ ಹಾಗೂ ಸವಲತ್ತು ಪಡೆಯಲು ರೈಲ್ವೆ ಇಲಾಖೆಯಲ್ಲಿದ್ದ ಪತಿಯನ್ನು ಹತ್ಯೆಗೈದ ಪತ್ನಿ..! ಹೃದಯಾಘಾತದ ಕಥೆ ಕಟ್ಟಿದ್ದ ಆಕೆ ಸಿಕ್ಕಿಬಿದ್ದದ್ದೇಗೆ..?

See also  ಯೂತ್ ಕಾಂಗ್ರೆಸ್ ಮುಖಂಡ ನಲಪಾಡ್ ಕಡೆಯವರು ಎಂದು ಹೇಳಿ ವಿದ್ಯಾರ್ಥಿಯನ್ನು ಕಿಡ್ನಾಪ್ ಮಾಡಿ ಕಿರುಕುಳ..! 9 ಮಂದಿ ವಿರುದ್ಧ ಎಫ್​.ಐ.ಆರ್..! ಯುವಕ ನೀಡಿದ ದೂರಿನಲ್ಲೇನಿದೆ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget