ಕ್ರೈಂದೇಶ-ಪ್ರಪಂಚದೇಶ-ವಿದೇಶರಾಜಕೀಯರಾಜ್ಯ

ಪಾಸ್‌ ಪೋರ್ಟ್ ಕ್ಯಾನ್ಸಲ್ ಆಗುವುದನ್ನು ತಿಳಿದು ಪ್ರಜ್ವಲ್ ವಾಪಸ್ ಬರ್ತಿದ್ದಾರೆ ಎಂದ ಗೃಹ ಸಚಿವ..! ಪ್ರಜ್ವಲ್ ಗೆ ಜಿ.ಪರಮೇಶ್ವರ್ ನೀಡಿದ ಎಚ್ಚರಿಕೆ ಏನು..?

ನ್ಯೂಸ್ ನಾಟೌಟ್: ಪ್ರಜ್ವಲ್ ರೇವಣ್ಣ ಸಂಸದ ಸ್ಥಾನ ಅಂತ್ಯವಾಗಲಿದ್ದು, ಸಂಸದ ಸ್ಥಾನ ಅಂತ್ಯವಾದರೆ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಕ್ಯಾನ್ಸಲ್ ಆಗಲಿದೆ, ಈ ಕಾರಣದಿಂದ ಮತ್ತೆ ಬರುವುದಾಗಿ ಅವರೇ ಹೇಳಿಕೆ ಬಿಡುಗಡೆ ಮಾಡಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಜ್ವಲ್ ರೇವಣ್ಣ ತನಿಖೆಗಾಗಿ ಎಸ್‌ಐಟಿ (SIT) ಎಲ್ಲ ಪ್ರಯತ್ನ ಮಾಡುತ್ತಿದೆ. ವಾರೆಂಟ್ ಮೂಲಕ ಕೇಂದ್ರ ವಿದೇಶಾಂಗ ಇಲಾಖೆಗೆ ತಿಳಿಸಿದ್ದೇವೆ. ಬ್ಲೂ ಕಾರ್ನರ್ ನೋಟಿಸ್ ಕೊಟ್ಟಿದ್ದೂ ಗೊತ್ತಿದೆ. ಆದರೀಗ ಅವರ ಪಾಸ್‌ಪೋರ್ಟ್ ರದ್ದಾಗುವ ಹಿನ್ನೆಲೆಯಲ್ಲಿ ಎಲ್ಲವನ್ನೂ ತಿಳಿದು ವಾಪಸ್ ಬರುತ್ತೇನೆ ಅಂತಾ ವೀಡಿಯೋ ಮೂಲಕ ತಿಳಿಸಿದ್ದಾರೆ. ಕಾಂಗ್ರೆಸ್ ಷಡ್ಯಂತ್ರ ಮಾಡಿದೆ ಎಂಬ ಪ್ರಜ್ವಲ್ ಆರೋಪಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ, ಅದೆನ್ನೆಲ್ಲಾ ನೋಡೋಣ. ಎಸ್‌ಐಟಿ ಅವರು ಗಮನಿಸುತ್ತಾರೆ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಪಾಸ್ ಪೋರ್ಟ್ ರದ್ದತಿ ಪ್ರಕ್ರಿಯೇ ಜಾರಿಯಲ್ಲಿರುವಾಗಲೇ ರಾಜ್ಯಕ್ಕೆ ಮೇ 31 ರಂದು ವಾಪಸ್‌ ಬರುವುದಾಗಿ ವೀಡಿಯೋ ಮೂಲಕ ಸಂಸದ ಪ್ರಜ್ವಲ್‌ ರೇವಣ್ಣ ತಿಳಿಸಿದ್ದು ಈಗ ಹಲವು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.\

https://newsnotout.com/2024/05/kiccha-in-tulunadu-and-speech-kannada-news
https://newsnotout.com/2024/05/nmc-talent-hire-2k24-news-innaguaration
https://newsnotout.com/2024/05/mangaluru-namaz-on-public-road-issue/

Related posts

ಅರಂತೋಡು: ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಕ್ಯಾನ್ಸರ್ ಪೀಡಿತ ಬಾಲಕಿಯ ಆಸೆ ಈಡೇರಿಸಿದ ಕಿಚ್ಚ!

ಪುತ್ತೂರು: ಜೀಪು – ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ, ಮಕ್ಕಳನ್ನು ಕೂರಿಸಿಕೊಂಡು ಔಷಧಿಗೆಂದು ಬಂದಿದ್ದ ತಂದೆ ಸಾವು, ಪುಟ್ಟ ಕಂದಮ್ಮಗಳಿಗೆ ಗಂಭೀರ ಗಾಯ