Latestಕ್ರೈಂಸಿನಿಮಾ

ದುಬೈನಿಂದ ಅಕ್ರಮವಾಗಿ ಚಿನ್ನ ತಂದರಾ ಕನ್ನಡದ ನಟಿ..? ವಿಮಾನ ನಿಲ್ದಾಣದಲ್ಲಿ ನಟಿ ಪೊಲೀಸ್ ವಶಕ್ಕೆ..!

581

ನ್ಯೂಸ್ ನಾಟೌಟ್: ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಆರೋಪದ ಮೇಲೆ ಕನ್ನಡದ ನಟಿ ರನ್ಯಾ ರಾವ್ ನನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಬಳಿಕ ವಿಚಾರಣೆ ನಡೆಸಲಾಗುತ್ತಿದೆ. ಅವರು ಸುದೀಪ್ ನಟನೆಯ ‘ಮಾಣಿಕ್ಯ’ ಸಿನಿಮಾದಲ್ಲಿ ನಟಿಸಿದ್ದರು.

ನಟಿ ರನ್ಯಾ ರಾವ್ ಡಿಜಿಪಿ ರಾಮಚಂದ್ರ ರಾವ್ ಸಂಬಂಧಿಯಾಗಿದ್ದಾರೆ ಎನ್ನಲಾಗಿದೆ. ರನ್ಯಾ ದುಬೈನಿಂದ ಬೆಂಗಳೂರಿಗೆ ಮಾರ್ಚ್ 3ರ ರಾತ್ರಿ ಮರಳಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಏರ್​ಪೋರ್ಟ್​ ಕಸ್ಟಮ್ಸ್ ​ನ ಡಿಆರ್ ​ಐ ಅಧಿಕಾರಿಗಳು ರನ್ಯಾ ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿದೇಶದಿಂದ ಹೆಚ್ಚುವರಿ ಗೋಲ್ಡ್ ತಂದ ಆರೋಪ ರನ್ಯಾ ಮೇಲೆ ಇದೆ.

ಅವರು ಮೂಲತಃ ಚಿಕ್ಕಮಗಳೂರಿನವರು. ನಟನಾ ವೃತ್ತಿ ಆರಂಭಿಸಲು ಬೆಂಗಳೂರಿಗೆ ಬಂದರು. 2014ರಲ್ಲಿ ಸುದೀಪ್ ನಟನೆಯ ‘ಮಾಣಿಕ್ಯ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಈ ಚಿತ್ರದಲ್ಲಿ ಮಾನಸಾ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡರು. 2016ರಲ್ಲಿ ತಮಿಳಿನ ಸಿನಿಮಾ ಒಂದನ್ನು ಮಾಡಿದ್ದರು. ಆದರೆ, ಇದು ಅಷ್ಟಾಗಿ ಗೆಲುವು ತಂದುಕೊಡಲಿಲ್ಲ. ಈಗ ಅಕ್ರಮ ಚಿನ್ನ ಸಾಗಾಣೆ ಆರೋಪ ಎದುರಿಸುತ್ತಿದ್ದಾರೆ.

See also  ನೃತ್ಯ ಮಾಡುತ್ತಲೇ ವೇದಿಕೆಯಲ್ಲೇ ಕುಸಿದು ಬಿದ್ದು ಮೃತ ಪಟ್ಟ ವ್ಯಕ್ತಿ..! ಇಲ್ಲಿದೆ ವಿಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget