ಕ್ರೀಡೆ/ಸಿನಿಮಾ

ಫ್ರೆಂಡ್ಸ್ ಟ್ರೋಫಿ ಕ್ರಿಕೆಟ್: ಯುನೈಟೆಡ್ ಅರಂಬೂರು ಚಾಂಪಿಯನ್

131
Spread the love

ಸಂಪಾಜೆ: ಇಲ್ಲಿನ ಸಂಪಾಜೆ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಫ್ರೆಂಡ್ಸ್ ಗೂನಡ್ಕ ಆಯೋಜಿಸಿದ್ದ ಫ್ರೆಂಡ್ಸ್ ಟ್ರೋಫಿ  2022 ಕ್ರಿಕೆಟ್ ಕೂಟದಲ್ಲಿ ಯುನೈಟೆಡ್ ಆರಂಬೂರು ತಂಡ ಚಾಂಪಿಯನ್ ಆಗಿದೆ. ರನ್ನರ್ ಅಪ್ ಪ್ರಶಸ್ತಿಯನ್ನು ಆತಿಥೇಯ ಯಶಸ್ವಿ ಕಲ್ಲುಗುಂಡಿ ತಂಡ ಪಡೆದುಕೊಂಡಿದೆ.

ಕಬಡ್ಡಿ ಕೂಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವರ್ಷ ಉಳುವಾರು ಅವರಿಗೆ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಪುಷ್ಪ ಮೆದಪ್ಪ ಸನ್ಮಾನಿಸಿ ಶುಭ ಹಾರೈಸಿದರು. ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ್ ಕೊಇಂಗಾಜೆ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ. ಎಮ್. ಶಾಹಿದ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಬೂಸಾಲಿ ಪಿ. ಕೆ., ಸವಾದ್ ಗೂನಡ್ಕ , ಹನೀಫ್ ಎಸ್. ಕೆ,

ಸಜ್ಜನ ಪ್ರತಿಷ್ಠಾನದ ರಹೀಮ್ ಬೀಜದ ಕಟ್ಟೆ, ಮಾಲಿನಿ, ಗುರು ಪ್ರಸಾದ್, ಮೋಹನ್ ಪೆರುಂಗೋಡಿ, ವರ್ತಕರ ಸಂಘದ ಅಧ್ಯಕ್ಷ ಯುಬಿ ಚಕ್ರಪಾಣಿ, ರಂಜನ್ ಕಲ್ಲಗದ್ದೆ, ಜಿ.ಜಿ ನವೀನ್, ವಿನಯ ದರ್ಕಾಸ್, ಜಾಬೀರ್ ಎಂ.ಬಿ, ಉನೈಸ್ ಪಿ. ಯು. ಉಬೈಸ್, ಪಿ. ಯು. ಹೇಮಾನಾಥ್, ಸಫ್ವಾನ್, ಶರತ್ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

See also  ಪ್ರೊ ಕಬಡ್ಡಿ: ಉಳಿಕೆ ಆಟಗಾರರ ಪಟ್ಟಿ ಪ್ರಕಟ, ಪವನ್ ಸೆಹ್ರಾವತ್ ಉಳಿಸಿಕೊಂಡ ಬೆಂಗಳೂರು ಬುಲ್ಸ್
  Ad Widget   Ad Widget   Ad Widget