Latestಸಿನಿಮಾ

ಕಾಮಿಡಿ ನಟ ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದ ಸ್ನೇಹಿತ ವರ್ಗ,ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ,ಕಣ್ಣೀರಾದ ಕಲಾವಿದರು

1.7k

ನ್ಯೂಸ್ ನಾಟೌಟ್: ಕಾಮಿಡಿ ಕಿಲಾಡಿಗಳು ಸೀಸನ್ -3ರ ವಿನ್ನರ್​ ರಾಕೇಶ್ ಪೂಜಾರಿ (34) ಅವರು ಹೃದಯಾಘಾತದಿಂದ ನಿಧನರಾಗಿರುವ ಸುದ್ಧಿ ಎಲ್ಲರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.ನಂಬೋದಕ್ಕೆ ಅಸಾಧ್ಯವಾದ ಘಟನೆಗೆ ಅವರ ಅಭಿಮಾನಿಗಳು ಕಣ್ಣೀರಾಗಿದ್ದಾರೆ. ಮನೆಗೆ ಆಧಾರವಾಗಿದ್ದ ಮಗ ರಾಕೇಶ್​ನನ್ನು ಕಳೆದುಕೊಂಡ ದುಃಖದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ನಟ ರಾಕೇಶ್ ಪೂಜಾರಿಯವರ ಅಂತಿಮ ದರ್ಶನವನ್ನು ಅವರ ಸ್ನೇಹಿತ ವರ್ಗ , ಕುಟುಂಬ ವರ್ಗ ಸೇರಿದಂತೆ ಕಾಮಿಡಿ ಕಿಲಾಡಿ ಕಲಾವಿದರು ಪಡೆದುಕೊಂಡಿದ್ದಾರೆ. ನಟಿ ನಯನ, ಸೂರ್ಯ ಕುಂದಾಪುರ, ದೀಕ್ಷಿತ್, ಪ್ರವೀಣ್, ದೀಪಿಕಾ, ವಾಣಿ, ಉಮೇಶ್ ಕಿನ್ಮಾರ, ಸೂರಜ್, ಜೀ ಮೆಂಟರ್ ವಿಜಯ್ ಶೆಟ್ಟಿ ಸೇರಿದಂತೆ ಸಾಕಷ್ಟು ಕಲಾವಿದರು ಬರುತ್ತಿದ್ದಾರೆ,ಹೀಗಾಗಿ ಅಂತಿಮ ದರ್ಶನ ಪಡೆಯಲು ಜನ ಸಾಗರವೇ ಹರಿದು ಬರುತ್ತಿದೆ. ಸದ್ಯ ವಿಧಿ ವಿಧಾನದಂತೆ ರಾಕೇಶ್ ಪೂಜಾರಿ ಅವರ ಅಂತ್ಯಕ್ರಿಯೆ ಮಾಡಲಾಗುತ್ತಿದೆ.ರಾಕೇಶ್ ಪೂಜಾರಿ ಅವರ ಹುಟ್ಟೂರು ಉಡುಪಿ, ಇವರ ತಂದೆ ದಿನಕರ್ ಪೂಜಾರಿ ಹಾಗೂ ತಾಯಿ ಶಾಂಭವಿ. ರಾಕೇಶ್​ ಪೂಜಾರಿ ಅವರಿಗೆ ಒಬ್ಬಳು ತಂಗಿ ಕೂಡ ಇದ್ದಾರೆ.

ಜೀವನದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದ್ದ ರಾಕೇಶ್ ಪೂಜಾರಿಯವರಿಗೆ ಮೊದಲ ಯಶಸ್ಸು ಸಿಕ್ಕಿದ್ದು ಕಾಮಿಡಿ ಕಿಲಾಡಿಗಳು ಸೀಸನ್ 3ಯಲ್ಲಿ. ಇದರಲ್ಲಿ ವಿನ್ನರ್ ಆಗುವ ಮೂಲಕ ರಾಜ್ಯದಲ್ಲಿಯೇ ಗುರುತಿಸಿಕೊಂಡರು.ಕಾಮಿಡಿ ಕಿಲಾಡಿನಲ್ಲಿ ವಿನ್ನರ್ ಆಗಬೇಕೆಂದು ರಾಕೇಶ್ ಹಗಲಿರುಳು ಶ್ರಮಿಸಿದ್ದರು. ಹಾಗೆಯೇ ತುಳುನಾಡಿನ ಕೊರಗಜ್ಜ ದೈವ ದೇವರಿಗೂ ಹರಕೆಯನ್ನು ಹೇಳಿಕೊಂಡಿದ್ದರು . ಅಂತೆಯೇ ಕೊರಗಜ್ಜ ದೈವದ ಅನುಗ್ರಹದಿಂದ ಗೆಲುವು ಸಾಧಿಸಿದರು. ನಟ ರಾಕೇಶ್ ಪೂಜಾರಿ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಾಯಕ ಏಜೆಯ ಪಿಎ ವಿರೂಪಾಕ್ಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಕೇಶ್ ಅನಿರೀಕ್ಷಿತ ಸಾವಿನಿಂದ ಕಿರುತೆರೆ ಇಂಡಸ್ಟ್ರಿ ಆಘಾತಕ್ಕೆ ಒಳಗಾಗಿದೆ.

ರಾಕೇಶ್ ಪೂಜಾರಿ ಅವರು ನಿನ್ನೆ ಸ್ನೇಹಿತನ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ದಿಢೀರ್ ಬಿಪಿ ಲೋ ಆಗಿ ಕುಸಿದು ಬಿದ್ದಿದ್ದರು.ಆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ರಾಕೇಶ್ ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

See also  ರಾಷ್ಟ್ರಗೀತೆ ಹಾಡುವ ವೇಳೆ ಅಶಿಸ್ತಿನ ವರ್ತನೆ ತೋರಿದ ಬಿಹಾರ ಸಿಎಂ..! ವಿಡಿಯೋ ವೈರಲ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget