ಕ್ರೈಂವೈರಲ್ ನ್ಯೂಸ್

ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕ್ರೂರಿ, ಬೆಚ್ಚಿಬಿದ್ದ ಜನತೆ! ಏನಿದು ವಿಚಿತ್ರ ದ್ವೇಷದ ಕಥೆ!

314

ನ್ಯೂಸ್ ನಾಟೌಟ್ : ಚಿಂತಾಮಣಿ ತಾಲೂಕಿನ ಸಿದ್ದೇಪಲ್ಲಿ ಕ್ರಾಸ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿಯುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ, ಚಿಕ್ಕಬಳ್ಳಾಪುರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಕೌಟುಂಬಿಕ ಕಲಹದ ಕಾರಣದಿಂದ ಚಿಂತಾಮಣಿಯ ಗಾಂಧಿನಗರದ ವಿಜಯ್ ಎಂಬಾತ ಚೇಳೂರು ತಾಲ್ಲೂಕಿನ ಮಂಡಪಲ್ಲಿಯ ಮಾರೇಶ್ ಎಂಬುವವರ ಕತ್ತನ್ನು ಕೊಯ್ದು ರಕ್ತ ಕುಡಿದ್ದಾನೆ ಎನ್ನಲಾಗಿದೆ. ಕೃತ್ಯವನ್ನು ವಿಜಯ್ ವಿಡಿಯೋ ಮಾಡಿಸಿದ್ದು. ನಾಲ್ಕು ದಿನಗಳ ಹಿಂದೆ ಈ ಕೃತ್ಯ ನಡೆದದ್ದು, ತಡವಾಗಿ ಬೆಳಕಿಗೆ ಬಂದಿದೆ.

ವಿಜಯ್ ಮತ್ತು ಮಾರೇಶ್ ಸ್ನೇಹಿತರಾಗಿದ್ದು ಬಟ್ಟೆ ವ್ಯಾಪಾರ ಮಾಡುತಿದ್ದರು. ವಿಜಯ್ ಹೆಂಡತಿಯ ಜತೆ ಮಾರೇಶ್‌ ಅನೈತಿಕ ಸಂಬಂಧ ಹೊಂದಿದ್ದ ಎಂದು ಶಂಕಿಸಿ ಸ್ನೇಹಿತ ಮಾರೇಶ್ ನನ್ನು ಕ್ರೂರವಾಗಿ ಕೊಲೆ ಮಾಡಿ ವಿಕೃತಿ ಮೆರೆದಿದ್ದಾನೆ.
ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಜಯ್‌ನನ್ನು ಪೊಲೀಸರು ಬಂಧಿಸಿದ್ದಾರೆ.

See also  ಅಡ್ಕಾರ್ ನಲ್ಲಿ ಬಳಿ ರಿಕ್ಷಾ- ಬೈಕ್ ಡಿಕ್ಕಿ, ಸವಾರರಲ್ಲಿ ಓರ್ವನಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget