Latest

ಈತ ಮಕ್ಕಳ ವೈದ್ಯನೋ ಅಥವಾ ರಾಕ್ಷಸನೋ? 30 ವರ್ಷಗಳಲ್ಲಿ 300ಮಕ್ಕಳ ಮೇಲೆ ರೇಪ್,ನಾನು `ಶಿಶುಕಾಮಿ’ ಎಂದು ತಪ್ಪೊಪ್ಪಿಕೊಂಡ ಆರೋಪಿ

751

ನ್ಯೂಸ್‌ ನಾಟೌಟ್: ಈತ ವೈದ್ಯನೋ ಅಥವಾ ವೈದ್ಯ ರೂಪದಲ್ಲಿರುವ ಪಿಶಾಚಿಯೋ ಗೊತ್ತಾಗುತ್ತಿಲ್ಲ.ಚಿಕ್ಕ ಮಕ್ಕಳು ಅಂತ ನೋಡದೇ ಬರೋಬ್ಬರಿ ೩೦೦ ಮಕ್ಕಳ ಮೇಲೆ ರೇಪ್ ಮಾಡಿರುವ  ರಾಕ್ಷಸ ಈತ.ಎಷ್ಟು ಕ್ರೂರಿ ಅಂದ್ರೆ ಕೇವಲ ಹೆಣ್ಣು ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳ ಮೇಲೆಯೂ ಅತ್ಯಾಚಾರ ಮಾಡುತ್ತಾನೆ ಅಂದ್ರೆ ಇವನ ಮನಃಸ್ಥಿತಿ ಎಷ್ಟು ಕಠೋರವಾಗಿರಬೇಡ!!

 ಹೇಳಿ ಕೇಳಿ ಈತ ಫ್ರಾನ್ಸ್‌ನ ವೈದ್ಯ. ಎಲ್ಲಾದರೇನಂತೆ ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರೂ ಒಂದೇ ತಾನೇ.ಆತನಲ್ಲೂ ಹರಿಯುತ್ತಿರುವುದು ಕೆಂಪು ರಕ್ತನೇ,,ಭಾವನೆಗಳು ಕೂಡ ಒಂದೇ ಆಗಿರುತ್ತೆ.. ಕಳೆದ 30 ವರ್ಷಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದ ಮಕ್ಕಳ ಮೇಲೆ ಅತ್ಯಾಚಾರ ಎಸಗುವುದೇ ಈತನ ಕಾಯಕ. ಹೆಚ್ಚು ಕಡಿಮೆ ೩೦೦ ಮಕ್ಕಳ ಮೇಲೆ ಈ ಕೃತ್ಯ ಎಸಗಿದ್ದಾನೆ ಅನ್ನುವ ಭಯಾನಕ ಘಟನೆ ಬೆಳಕಿಗೆ ಬಂದಿದೆ.

ಕೋರ್ಟ್‌ನಲ್ಲಿ ವಿಚಾರಣೆ ವೇಳೆ ತಾನೊಬ್ಬ `ಶಿಶುಕಾಮಿ’ ಎಂದು ಆತನೇ ಒಪ್ಪಿಕೊಂಡಿರುವುದಾಗಿ ವರದಿ ತಿಳಿಸಿದೆ.ಆರೋಪಿ ವೈದ್ಯ ಜೋಯೆಲ್ ಲೇ ಸ್ಕಾನರ್ಕ್ (74) ವೆನಿಸ್ ಕೋರ್ಟ್‌ನಲ್ಲಿ (Venice Court) ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.ಪೊಲೀಸರು, ಅತ್ಯಾಚಾರ ಆರೋಪದಡಿ ವೈದ್ಯನ ಮನೆಯಲ್ಲಿ ಶೋಧ ನಡೆಸಿದಾಗ ಆತನೇ ಬರೆದಿರುವ ದಾಖಲೆಗಳು, ಫೋಟೋಗಳು, ವಿಡಿಯೋಗಳು ಸಿಕ್ಕಿವೆ.

ಗಂಡು ಹಾಗೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ವೆನಿಸ್ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಸ್ವತಃ ವೈದ್ಯನೇ ತಪ್ಪೊಪ್ಪಿಕೊಂಡು, ಕಳೆದ 30 ವರ್ಷದಿಂದ ಈ ಕೃತ್ಯ ಎಸಗಿದ್ದಾಗಿ ಹೇಳಿದ್ದಾನೆ. 2020ರಲ್ಲಿಯೂ 4 ಮಕ್ಕಳ ಮೇಲೆ ಅತ್ಯಾಚಾರ ಎಸಗಿದ್ದಕ್ಕೆ ಆತನಿಗೆ 15 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

See also  ಶೌಚಾಲಯದ ನೀರಿನ ಮಾರಾಟದಿಂದ 300 ಕೋಟಿ ರೂ. ಸಂಪಾದನೆ..! ಶಾಕಿಂಗ್ ಮಾಹಿತಿ ನೀಡಿದ ಕೇಂದ್ರ ಸಚಿವ ಗಡ್ಕರಿ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget