ಬೆಂಗಳೂರುರಾಜಕೀಯವೈರಲ್ ನ್ಯೂಸ್

ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ನಾವು ವಿದ್ಯುತ್‌ ಬಿಲ್ ಕಟ್ಟಲ್ಲ…!

ನ್ಯೂಸ್‌ನಾಟೌಟ್‌: ರಾಜ್ಯದಲ್ಲಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹಲವಾರು ಗ್ಯಾರೆಂಟಿಗಳನ್ನು ಘೋ‍ಷಿಸಿದ್ದು, ಇದರಲ್ಲಿ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಭರವಸೆಯನ್ನು ಗ್ರಾಮೀಣ ಜನರು ಬಲವಾಗಿ ನಂಬಿದ್ದು, ಇದಕ್ಕೆ ಪೂರಕವೆಂಬಂತೆ ಚಿತ್ರದುರ್ಗ ಜಿಲ್ಲೆಯ ಜಾಲಿಕಟ್ಟೆ ಗ್ರಾಮದಲ್ಲಿ ಗ್ರಾಮಸ್ಥರು ವಿದ್ಯುತ್‌ ಬಿಲ್‌ ಪಾವತಿಗೆ ನಿರಾಕರಿಸಿದ್ದು, ಬೆಸ್ಕಾಂ ಮೀಟರ್‌ ರೀಡರ್‌ಗೆ ಆವಾಜ್‌ ಹಾಕಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಬಂದಿದೆ ಎಂದು ಇನ್ನೂ ಗ್ರಾಮಸ್ಥರು ವಿದ್ಯುತ್ ಬಿಲ್ ಕಟ್ಟಲ್ಲ ಎಂದಿರುವ ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲಿ ಜನರು, “ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ನಾವು ಬಿಲ್ ಕಟ್ಟಲ್ಲ. ವಿದ್ಯುತ್ ಫ್ರೀ ಎಂದು ಮೊದಲೇ ಕಾಂಗ್ರೆಸ್ ಘೋಷಿಸಿದೆ. ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆಯಲ್ಲ” ಎಂದು ಜನ ವಾದಿಸುತ್ತಿದ್ದಾರೆ. ಆದರೆ ಈ ಆದೇಶ ಬರುವವರೆಗೆ ಬಿಲ್ ಕಟ್ಟಲೇಬೇಕೆಂದು ಮೀಟರ್ ರೀಡರ್ ಜನರಿಗೆ ಅರ್ಥ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಉತ್ತರಿಸಿದ ಗ್ರಾಮಸ್ಥರು, ಆದೇಶದ ಬಗ್ಗೆ ಕಾಂಗ್ರೆಸ್​ನವರಿಗೇ ಕೇಳಿ ಎಂದು ಮೀಟರ್​ ರೀಡಿಂಗ್​ ಬಂದವರನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

Related posts

ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಕಾವಿ ತೆಗೆದು ಟೀ ಶರ್ಟ್ ಧರಿಸಿ ಒಡಿಶಾ ರೈಲಿನಲ್ಲಿದ್ದ ಹಾಲಶ್ರೀ ಪೊಲೀಸ್ ಬಲೆಗೆ! ಇಲ್ಲಿದೆ ಪೊಲೀಸರ ರೋಚಕ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ

ಭಾರತದ ಮೊದಲ ವೈಮಾನಿಕ ದಾಳಿ ಆಧಾರಿತ ಚಿತ್ರದ ಟ್ರೇಲರ್‌ ರಿಲೀಸ್..! ಚಿತ್ರದ ಬಿಡುಗಡೆ ಯಾವಾಗ ..?

ಯಾರು ಈ ಭಾರತ ಮೂಲದ ಖಲಿಸ್ತಾನಿ ಉಗ್ರ ? ಕೆನಡಾ ಮತ್ತು ಭಾರತದ ತಿಕ್ಕಾಟಕ್ಕೆ ಕಾರಣವೇನು? ಆರ್‌ಎಸ್‌ಎಸ್ ನಾಯಕರ ಹತ್ಯೆಯಲ್ಲಿತ್ತಾ ಈತನ ಕೈವಾಡ?