ಬೆಂಗಳೂರುವೈರಲ್ ನ್ಯೂಸ್

ಉಚಿತ ಬಸ್ ಪ್ರಯಾಣಕ್ಕೆ ನಕಲಿ ಆಧಾರ್ ಕಾರ್ಡ್ ಬಳಸಿ ಸಿಕ್ಕಿಬಿದ್ದ ಮಹಿಳೆ..! ಕಂಡೆಕ್ಟರ್‌ ಮಾಡಿದ್ದೇನು ಗೊತ್ತಾ?

325

ನ್ಯೂಸ್ ನಾಟೌಟ್: ಕರ್ನಾಟಕದ ಮಹಿಳೆಯರಿಗೆ ಸಿಎಂ ಸಿದ್ದರಾಮಯ್ಯ ಶಕ್ತಿ ಯೋಜನೆ ಜಾರಿಗೊಳಿಸಿದ ಎರಡೇ ದಿನಕ್ಕೆ ಅಂತಾರಾಜ್ಯ ಮಹಿಳೆ ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ಉಚಿತವಾಗಿ ಪ್ರಯಾಣಿಸಲು ಮುಂದಾಗಿ ಸಿಕ್ಕಿಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ಕನ್ನಡದಲ್ಲಿ ಮುದ್ರಿಸಲಾದ ಆಧಾರ್ ಕಾರ್ಡ್ ಅನ್ನು ಸ್ಥಳೀಯ ನಿವಾಸಿ ಎಂದು ತೋರಿಸಿ ಸಿಕ್ಕಿಬಿದ್ದಿದ್ದಾರೆ. ಕೂಡಲೇ ಈ ವಿಚಾರವನ್ನು ತಪಾಸಣಾ ಅಧಿಕಾರಿಯ ಗಮನಕ್ಕೆ ತರಲಾಗಿದೆ. ಆಕೆ ರಾಜ್ಯದ ನಿವಾಸಿಯೇ ಎಂದು ಖಚಿತಪಡಿಸಿ ಶೂನ್ಯ ಟಿಕೆಟ್‌ ನೀಡುವಂತೆ ನಿರ್ವಾಹಕರಿಗೆ ಸೂಚಿಸಲಾಗಿದೆ. ಆದರೆ ಬಿಎಂಟಿಸಿಯ ಯಾವ ಘಟಕದಲ್ಲಿ ನಡೆದಿದೆ ಅನ್ನುವುದು ಖಚಿತವಾಗಿ ತಿಳಿದು ಬಂದಿಲ್ಲ.

ಅಂತೆಯೇ ತಮಿಳುನಾಡಿನ ಮಹಿಳೆಯೊಬ್ಬರು ಮೆಜೆಸ್ಟಿಕ್‌ನಿಂದ ಬಿಎಂಟಿಸಿ ಬಸ್‌ನಲ್ಲಿ ಹೊರಟಿದ್ದರು. ಅಲ್ಲದೆ ಯೋಜನೆ ಕುರಿತು ಮಾಹಿತಿ ನೀಡಿದ್ದು ಯಾವುದೇ ದಂಡ ವಸೂಲಿ ಮಾಡದೆ ಟಿಕೆಟ್ ದರವನ್ನು ಮಾತ್ರ ಪಡೆದು ಕಳಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ಬೆಂಗಳೂರಿನಲ್ಲಿ ಉಚಿತ ಪ್ರಯಾಣಕ್ಕೆ ಒರಿಜಿನಲ್ ಆಧಾರ್ ಕಾರ್ಡ್ ತೋರಿಸದ ಸ್ತ್ರೀಯರನ್ನು ಕಂಡೆಕ್ಟರ್ ಇಳಿಸಿದ್ದಾರೆ ಅನ್ನುವ ವಿಚಾರ ತಿಳಿದು ಬಂದಿದೆ. ಈ ಘಟನೆ ಮೆಜೆಸ್ಟಿಕ್ -ಹೆಸರಘಟ್ಟ ಬಸ್ ನಲ್ಲಿ ನಡೆದಿದ್ದು ಬಿಎಂಟಿಸಿ ಬಸ್ ನಿರ್ವಾಹಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

See also  Police Bus: ಮಧ್ಯರಾತ್ರಿ ಕಮಿಷನರ್ ಕಚೇರಿ ಆವರಣದಲ್ಲೇ ಬಸ್ ಕದ್ದ ಕಳ್ಳ..! ಮಲಗಿದ್ದ ಕಾನ್ಸ್ಟೇಬಲ್ ಸಮೇತ ಬಸ್ ಕಳವಿಗೆ ಯತ್ನ..! ಇಲ್ಲಿದೆ ಚಾಲಾಕಿ ಕಳ್ಳನ ಕಥೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget