ಕ್ರೈಂವೈರಲ್ ನ್ಯೂಸ್

Free Bus Effect: ಬಸ್ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಬುರ್ಖಾ ತೊಟ್ಟ ಪುರುಷ..! ಅಷ್ಟಕ್ಕೂ ಆತ ಹೊರಟದ್ದೆಲ್ಲಿಗೆ ಗೊತ್ತಾ..?

ನ್ಯೂಸ್ ನಾಟೌಟ್ : ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಬಗ್ಗೆ ಎಷ್ಟೋ ಪರ ವಿರೋಧ ಚರ್ಚೆಗಳು ನಡುವೆ ಹಲವು ಸ್ವಾರಸ್ಯಕರ ಘಟನೆಗಳು ಬೆಳಕಿಗೆ ಬರುತ್ತಿವೆ. ಲಕ್ಷಾಂತರ ಮಹಿಳೆಯರು ಈ ಯೋಜನೆಯ ಉಪಯೋಗವನ್ನು ಪ್ರತಿದಿನ ಪಡೆದುಕೊಳ್ಳುತ್ತಿದ್ದಾರೆ.

ಆದರೆ ಉಚಿತ ಬಸ್ ಪ್ರಯಾಣ ಯೋಜನೆಗೆ (Free Bus Effect) ಸಂಬಂಧಿಸಿ ತುಂಬಾ ಅಂದರೆ ತುಂಬಾ ವಿಚಿತ್ರ ಘಟನೆಯೊಂದು ಧಾರವಾಡದಲ್ಲಿ ನಿನ್ನೆ (ಜುಲೈ 6) ನಡೆದಿದೆ.
ಧಾರವಾಡದ ಸಂಶಿ ಬಸ್ ನಿಲ್ದಾಣದ ಬಳಿ ಬುರ್ಖಾ ತೊಟ್ಟು ಮಹಿಳೆಯೊಬ್ಬರು ಕುಳಿತಿದ್ದರು. ಆದರೆ ಅಲ್ಲೇ ಸುತ್ತಮುತ್ತಲು ಓಡಾಡುತ್ತಿದ್ದವರಿಗೆ ಮಹಿಳೆಯ ಬಗ್ಗೆ ಸಂಶಯದ ಸುಳಿಯೊಂದು ಹುಟ್ಟಿಕೊಂಡಿದೆ.

ಹೀಗಾಗಿ ಕೆಲವರು ಒಟ್ಟಾಗಿ ಬುರ್ಖಾಧಾರಿಯ ಬಳಿ ಬುರ್ಖಾ ತೆಗೆದು ಮುಖ ತೋರಿಸುವಂತೆ ಹೇಳಿದ್ದಾರೆ. ಆಗಲೇ ಆತನೊಬ್ಬ ಬುರ್ಖಾ ಧರಿಸಿ ಬಸ್ಸ್ ನಲ್ಲಿ ಪ್ರಯಾಣಿಸಲು ಕುಳಿತಿದ್ದ ವಿಷಯ ಬಹಿರಂಗವಾಗಿದೆ. ಆದರೆ, ಆದ ಭಿಕ್ಷೆ ಬೇಡಲು ಬಂದಿದ್ದೆ ಎಂದು ಹೇಳಿದ್ದಾನೆ ಎನ್ನಲಾಗಿದೆ.

Related posts

ಚಹಾ ಮಾರುತ್ತಿದ್ದ ಬಡ ಮಹಿಳೆ ಗ್ರಾ.ಪಂ. ಅಧ್ಯಕ್ಷೆಯಾಗಿ ಆಯ್ಕೆ..! ಅವಿರೋಧ ಆಯ್ಕೆಯ ಬಗ್ಗೆ ಆಕೆ ಹೇಳಿದ್ದೇನು?

ಆಸ್ಪತ್ರೆಯಲ್ಲಿ ರೀಲ್ಸ್‌ ಮಾಡಿದ ಮೆಡಿಕಲ್‌ ವಿದ್ಯಾರ್ಥಿಗಳು ಅಮಾನತ್ತು..! ಇಲ್ಲಿವೆ ವೈರಲ್ ವಿಡಿಯೋಗಳು

ಕರ್ನಾಟಕದ ಐಪಿಎಸ್ ಅಧಿಕಾರಿ ತಮಿಳ್ ನಾಡಲ್ಲಿ ಅರೆಸ್ಟ್ ಆಗಿದ್ದೇಕೆ..? ಇಲ್ಲಿದೆ ಪೊಲೀಸರ ನಡುವಿನ ಹೊಡೆದಾಟದ ಕಥೆ..!