ವೈರಲ್ ನ್ಯೂಸ್

ಫ್ರೀ ಬಸ್‌ನಲ್ಲಿ ಪುರುಷರ ಸೀಟ್‌ ಆಕ್ರಮಿಸಿ ಮಹಿಳೆಯರ ಪ್ರಯಾಣ..! ಸೀಟು ಸಿಗದೆ ರೊಚ್ಚಿಗೆದ್ದ ಗಂಡಸರಿಂದ ಬಸ್ ನಿಲ್ಲಿಸಿ ಗಲಾಟೆ..!

218

ನ್ಯೂಸ್ ನಾಟೌಟ್: ಸಿಎಂ ಸಿದ್ದರಾಮಯ್ಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಭಾಗ್ಯವನ್ನು ಕಲ್ಪಿಸಿರುವುದೇ ತಡ ಬಸ್‌ ವಿಪರೀತ ರಶ್ ಆಗುವುದಕ್ಕೆ ಶುರುವಾಗಿದೆ. ಮಹಿಳೆಯರು ಪೈಪೋಟಿಗೆ ಬಿದ್ದವರಂತೆ ಬಸ್‌ನಲ್ಲಿ ಪ್ರಯಾಣಿಸಲು ಶುರು ಮಾಡಿಕೊಂಡಿದ್ದಾರೆ. ಈ ನಡುವೆ ವಿಜಯಪುರದಲ್ಲಿ ಮಹಿಳಾ ಪ್ರಯಾಣಿಕರು ತಮ್ಮ ವ್ಯಾಪ್ತಿಯನ್ನು ಮೀರಿ ಪುರುಷರಿಗೆ ಮೀಸಲಿರುವ ಶೇ.50 ರಷ್ಟು ಸೀಟುಗಳನ್ನೂ ಆಕ್ರಮಿಸಿಕೊಂಡಿದ್ದು ಬಾರಿ ಗಲಾಟೆಗೆ ಕಾರಣವಾಗಿದೆ.

ಇಂತಹದ್ದೊಂದು ಗಲಾಟೆ ವಿಜಯಪುರದಲ್ಲಿ ನಡೆದಿದೆ. ಬಸ್ ನಲ್ಲಿ ಪ್ರಯಾಣಿಸುವ ಜೋಶ್‌ನಲ್ಲಿರುವ ಮಹಿಳೆಯರು ಬಸ್‌ವೊಂದಕ್ಕೆ ಪೈಪೋಟಿಗೆ ಬಿದ್ದವರಂತೆ ಹತ್ತಿದ್ದಾರೆ. ಈ ಬಸ್ ನಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು. ಶೇ.50 ರಷ್ಟು ಸೀಟುಗಳು ಪುರುಷರಿಗೆ ನೀಡಬೇಕು ಅನ್ನುವ ನಿಯಮವಿದೆ. ಆದರೆ ಮಹಿಳೆಯರೇ ಬಸ್ ತುಂಬಾ ತುಂಬಿಕೊಂಡಿದ್ದರಿಂದ ಪುರುಷರಿಗೆ ಬಸ್‌ನಲ್ಲಿ ಜಾಗವೇ ಸಿಗಲಿಲ್ಲ.

ಇದರಿಂದ ರೊಚ್ಚಿಗೆದ್ದ ಪುರುಷರು ಬಸ್‌ ಅನ್ನು ನಿಲ್ಲಿಸಿ ವಾಗ್ವಾದಕ್ಕಿಳಿದಿದ್ದಾರೆ. ಇನ್ನು ಮುದ್ದೆ ಮುದ್ದೇಬಿಹಾಳದ ಬಸ್ಸ್ ನಲ್ಲೂ ಇದೇ ರೀತಿಯ ಗಲಾಟೆ ನಡೆದಿದೆ. ಇದು ಅಂತರಾಜ್ಯ ಸಾರಿಗೆ ಎನ್ನುವ ಕಾರಣಕ್ಕೆ ಉಚಿತ ಟಿಕೇಟ್ ನಿರಾಕರಿಸಲಾಗಿದೆ.
ಕಂಡಕ್ಟರ್ ಜೊತೆ ಪ್ರಯಾಣಿಕರ ಗಲಾಟೆ ನಡೆಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

See also  ಜಾತಿ ಗಣತಿ ಅನುಷ್ಠಾನಕ್ಕೆ ಒಕ್ಕಲಿಗರ ಸ್ವಾಮೀಜಿ ತೀವ್ರ ವಿರೋಧ..! ಈ ಬಗ್ಗೆ ಸ್ವಾಮೀಜಿ ಹೇಳಿದ್ದೇನು..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget