ಬೆಂಗಳೂರು

ಈ ಯುವತಿಯರಿಗೆ ವೃದ್ಧರೇ ಟಾರ್ಗೆಟ್‌!! ನಗ್ನವಾಗಿ ವಿಡಿಯೋ ಕರೆ ಮಾಡಿ ಲಕ್ಷ ಲಕ್ಷ ಪೀಕಿಸುವ ಪ್ಲ್ಯಾನ್!ಸ್ವಲ್ಪ ಯಾಮಾರಿದ್ರೂ ​ಕಥೆ ಗೋವಿಂದ!

ನ್ಯೂಸ್‌ ನಾಟೌಟ್‌: ಅನಾಮಿಕ ನಂಬರ್‌ನಿಂದ ವಿಡಿಯೋ ಕಾಲ್ ಬಂದರೆ ಬಾರಿ ಎಚ್ಚರದಲ್ಲಿರೋದು ಒಳಿತು.ಯಾಕೆಂದರೆ ಸಮಯ ಸಂದರ್ಭ ಯಾವ ರೀತಿ ಇರುತ್ತೋ ಗೊತ್ತಿಲ್ಲ ಸ್ವಲ್ಪ ಯಾಮಾರಿದ್ರೂ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ.ಇದೀಗ ಯುವತಿಯೋರ್ವಳು ವಯಸ್ಸಾದ ಗಂಡಸಿಗೆ ವಿಡಿಯೋ ಕಾಲ್ ಮಾಡಿದ ಘಟನೆ ಬಗ್ಗೆ ವರದಿಯಾಗಿದೆ.ಮಾತ್ರವಲ್ಲ ಲಕ್ಷಾಂತರ ರೂ. ವಂಚನೆ ಮಾಡಿರುವ ಬಗ್ಗೆಯೂ ಆರೋಪ ಕೇಳಿ ಬಂದಿದೆ.

ಹೌದು, ಉತ್ತರ ಭಾರತದ ಪೊಲೀಸರೆಂದು ಹೇಳಿ‌ ಲಕ್ಷಾಂತರ ‌ರೂಪಾಯಿ ವಂಚನೆ ಮಾಡಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ಈ ಬಗ್ಗೆ ವೃದ್ಧ ದತ್ತಾತ್ರೇಯ ಭಟ್ (63) ರಿಂದ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಾರಂಭದಲ್ಲಿ ವಂಚಕರು ಮೊದಲಿಗೆ ಯುವತಿ ಕಡೆಯಿಂದ ವಿಡಿಯೋ ಕಾಲ್ ಮಾಡಿಸುತ್ತಾರೆ. ವಿಡಿಯೋ ಕಾಲ್​ನಲ್ಲಿ ಯುವತಿ ನಗ್ನವಾಗಿ ಬಳಿಕ ವೃದ್ಧರನ್ನು ನಗ್ನವಾಗುವಂತೆ ತಿಳಿಸುತ್ತಾರೆ. ನಂತರ‌ ಕೆಲಗಂಟೆಗಳ ವಾಪಸ್ ಕರೆ ಮಾಡಿ ನೀನು ನನ್ನ ವಿಡಿಯೋ ಕಾಲ್ ಅನ್ನು ಸ್ಕ್ರೀನ್ ರೆಕಾರ್ಡ್ ಮಾಡಿದ್ದೀಯಾ ನಾನು ನಿನ್ನ ಮೇಲೆ ಪೊಲೀಸರಿಗೆ ದೂರು ನೀಡುತ್ತೆನೆ‌ ಎಂದು ಬ್ಲಾಕ್ ಮೇಲ್ ಮಾಡುತ್ತಾರೆ.ಇದಾದ ಕೆಲವೆ ಗಂಟೆಗಳಲ್ಲಿ ಡೆಲ್ಲಿ ಸೈಬರ್ ಪೊಲೀಸ್ ಎಸಿಪಿ ವಿಕ್ರಮ್ ರಾಥೋಡ್ ಎಂದು ಕರೆ ಮಾಡುತ್ತಾರೆ. ನಿಮ್ಮ ಮೇಲೆ ಯುವತಿ ಒಬ್ಬರು ದೂರು ನೀಡಿದ್ದಾರೆ. ನೀವು ಅವರ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿದ್ದೀರಿ ಎಂದು ದೂರು ಬಂದಿದೆ. ನಾನು ನಿಮಗೆ ಸಹಾಯ ಮಾಡುತ್ತೇನೆ 50 ಸಾವಿರ ಹಣ ನೀಡಿ ಎಂದು ಬ್ಲ್ಯಾಕ್ ಮೇಲ್ ಮಾಡುತ್ತಾರೆ.

ಒಂದು ದಿನದ ನಂತರ‌ ಮತ್ತೆ ಪುಣೆ ಎಸಿಪಿ ಅರುಣ ಎಂದು ಹೇಳಿ ಕರೆ ಮಾಡುತ್ತಾರೆ. ನಿಮ್ಮ ಹೆಸರು ಮತ್ತು ಡೀಟೈಲ್ಸ್ ನೀಡಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಈ ಪ್ರಕರಣದಲ್ಲಿ ಪೊಲೀಸರು ನಿಮ್ಮನ್ನು ಬಂಧಿಸುತ್ತಾರೆ ಎಂದು ಬೆದರಿಕೆ ಹಾಕುತ್ತಾರೆ. ಪ್ರಕರಣ ದಿಂದ ಮುಕ್ತಿ ನೀಡಲು 40 ಲಕ್ಷ ಹಣಕ್ಕೆ ಡಿಮಾಂಡ್ ಮಾಡುತ್ತಾರೆ.  ಆಡ್ವಾನ್ಸ್ ಎಂದು ಹೇಳಿ ವಂಚಕರು ಒಂದು ಲಕ್ಷ ಪಡೆದಿದ್ದಾರೆ. ಹೀಗೆ ಪದೆ ಪದೇ ಕರೆ ಬಂದ‌ ಹಿನ್ನೆಲೆ ಅನುಮಾನ ಬಂದು ವೃದ್ಧ ದತ್ತಾತ್ರೇಯ ಭಟ್ (63 ) ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾರೆ. ಸದ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related posts

ತನ್ನ ಪ್ರಿಯಕರ ನನಗೆ ಮದುವೆಯಾಗಿದೆ ಎಂದದ್ದಕ್ಕೆ ಬಿಸಿನೀರು ಎರಚಿದ ವಿವಾಹಿತೆ..! ಬರ್ತಡೇ ಇದೆ ಬಾ ಎಂದು ಕರೆದಾಕೆ ಮಾಡಿದ್ದಳು ಖತರ್ನಾಕ್ ಪ್ಲಾನ್!

ಪಾಕ್​ ಪರ ​ಘೋಷಣೆ ಪ್ರಕರಣ: ಎಫ್​ಎಸ್​ಎಲ್​​ ವರದಿ ಬಿಡುಗಡೆಗೊಳಿಸಿದ ಬಿಜೆಪಿ..! ಸರ್ಕಾರವೇಕೆ ಎಫ್​ಎಸ್​ಎಲ್ ವರದಿಯನ್ನು ದೃಢಪಡಿಸಿಲ್ಲ..? ಅಷ್ಟಕ್ಕೂ ವರದಿಯಲ್ಲೇನಿದೆ..?

ವಿಧಾನಸೌಧದ ಕ್ಯಾಂಟೀನ್‌ಗೂ ನುಗ್ಗಿದ ಮಳೆ ನೀರು