ಕರಾವಳಿಕ್ರೈಂವೈರಲ್ ನ್ಯೂಸ್

ಐಫೋನ್‌ ಪ್ರೊ-12 ಆಸೆ ತೋರಿಸಿ 98,972 ರೂ. ವಂಚನೆ…!

ನ್ಯೂಸ್‌ ನಾಟೌಟ್‌: ಮೇಡಂ ನಿಮಗೆ ಬಹುಮಾನ ಬಂದಿದೆ ಎಂದು ವೈದ್ಯಕೀಯ ವಿದ್ಯಾರ್ಥಿನಿಗೆ ವಂಚಿಸಿರುವ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂ.3ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ‘ನೀವು ಐ ಫೋನ್ ಪ್ರೊ-12 ಗೆದ್ದಿದ್ದೀರಿ. ಅದನ್ನು ಕಳುಹಿಸಿಕೊಡಲು ಜಿಎಸ್‌ಟಿ ಪಾವತಿಸಬೇಕು’ ಎಂದು ಹೇಳಿದ್ದ ಅದನ್ನೇ ನಂಬಿದ್ದ ವಿದ್ಯಾರ್ಥಿನಿ ಗೂಗಲ್‌ಪೇ ಮೂಲಕ ಹಂತ ಹಂತವಾಗಿ 98,972 ರೂ. ಕಳುಹಿಸಿದ್ದರು. ಬಳಿಕ ಅಪರಿಚಿತ ವ್ಯಕ್ತಿ ಮತ್ತಷ್ಟು ಹಣ ಕಳುಹಿಸುವಂತೆ ಸೂಚಿಸಿದಾಗ ಅನುಮಾನ ಬಂದು ಸೆನ್‌ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ವಿವರಿಸಿದ್ದಾರೆ.

Related posts

ಕೋಡಿಂಬಾಳದಲ್ಲಿ ಕದ್ದುಮುಚ್ಚಿ ಶಾಮಿಯಾನ ಹಾಕಿ ಕೋಳಿ ಅಂಕ..!

ಕನಕಮಜಲು: ಜೋರು ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಗ್ಯಾಸ್ ಲಾರಿ, ರಸ್ತೆಯಲ್ಲೆಲ್ಲ ಸೋರಿಕೆಯಾದ ಗ್ಯಾಸ್, ವಾಹನ ಸಂಚಾರಕ್ಕೆ ಕೆಲಕಾಲ ಅಡೆತಡೆ

ಪೋಷಕರೇ ನಿಮ್ಮ ಮಕ್ಕಳನ್ನು ಡೇ ಕೇರ್ ಸೆಂಟರ್ ಗೆ ಕಳುಹಿಸಿ ಕೆಲಸಕ್ಕೆ ಹೋಗುತ್ತಿದ್ದೀರಾ? ಹಾಗಾದರೆ ವಿಡಿಯೋ ನೋಡಿ..