Latestಕರಾವಳಿದೇಶ-ವಿದೇಶರಾಜಕೀಯವೈರಲ್ ನ್ಯೂಸ್

ಫ್ರಾನ್ಸ್ ನಿಂದ 63,000 ಕೋಟಿ ರೂಪಾಯಿಯ 26 ರಫೇಲ್ ಯುದ್ಧ ವಿಮಾನ ಖರೀದಿ..! ಭಾರತದ ಸಾಗರ ಗಡಿಗಳನ್ನು ಕಾಯಲು ಗಡಿದಾಟಿ ಬಂದ ವೀರರು..!

853

ನ್ಯೂಸ್ ನಾಟೌಟ್: ಭಾರತ ಸರ್ಕಾರವು ಫ್ರಾನ್ಸ್‌ ನಿಂದ 26 ರಫೇಲ್ ಮೆರೈನ್ ಯುದ್ಧ ವಿಮಾನಗಳನ್ನು ಖರೀದಿಸುವ ಬೃಹತ್ ಒಪ್ಪಂದಕ್ಕೆ ಅಂತಿಮ ಅನುಮೋದನೆ ನೀಡಿದೆ. ಈ ಒಪ್ಪಂದದ ಮೌಲ್ಯ 63,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.

ಈ ಒಪ್ಪಂದದ ಅಡಿಯಲ್ಲಿ, ಫ್ರಾನ್ಸ್‌ ನ ಡಸಾಲ್ಟ್ ಏವಿಯೇಷನ್ ಕಂಪನಿಯು ಭಾರತೀಯ ನೌಕಾಪಡೆಗಾಗಿ 26 ರಫೇಲ್ ಯುದ್ಧ ವಿಮಾನಗಳನ್ನು ಪೂರೈಸಲಿದೆ,‌ ಇದರಲ್ಲಿ 22 ಸಿಂಗಲ್, 4 ಡಬಲ್ ಸೀಟರ್ ವಿಮಾನಗಳು ಒಳಗೊಂಡಿದೆ. ಈ ವಿಮಾನಗಳಿಂದ ಭಾರತದ ರಕ್ಷಣಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಾಗಲಿದೆ.

ರಫೇಲ್ ಮೆರೈನ್ ವಿಮಾನಗಳು ಆಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಹೊಂದಿದ್ದು, ಇವು ಭಾರತದ ಸಾಗರ ಗಡಿಗಳ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಈ ಖರೀದಿ ಪ್ರಕ್ರಿಯೆಯು ದೀರ್ಘಕಾಲದ ಮಾತುಕತೆಗಳ ನಂತರ ಅಂತಿಮಗೊಂಡಿದ್ದು, ರಕ್ಷಣಾ ಸಚಿವಾಲಯವು ಈ ಒಪ್ಪಂದವನ್ನು ಅಧಿಕೃತವಾಗಿ ದೃಢೀಕರಿಸಿದೆ.

ಈ ಒಪ್ಪಂದದ ಭಾಗವಾಗಿ, ತರಬೇತಿ, ದುರಸ್ತಿ, ಮತ್ತು ತಾಂತ್ರಿಕ ಸಹಾಯವನ್ನು ಒಳಗೊಂಡಂತೆ ಹಲವು ಸೌಲಭ್ಯಗಳನ್ನು ಫ್ರಾನ್ಸ್ ಒದಗಿಸಲಿದೆ. ಈ ಯುದ್ಧ ವಿಮಾನಗಳ ಸೇರ್ಪಡೆಯು ಭಾರತೀಯ ನೌಕಾಪಡೆಯ ಆಧುನೀಕರಣದಲ್ಲಿ ಮಹತ್ವದ ಮೈಲಿಗಲ್ಲು ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಈ ಒಪ್ಪಂದವು ಭಾರತದ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಮತ್ತು ಆಧುನಿಕೀಕರಣದ ದಿಕ್ಕಿನಲ್ಲಿ ಮತ್ತೊಂದು ಪ್ರಗತಿಯನ್ನು ಸೂಚಿಸುತ್ತದೆ.

ಅಮೆರಿಕದ ತೆರಿಗೆ ನೀತಿಯ ವಿರುದ್ಧ ಹೋರಾಟಕ್ಕೆ ಭಾರತ ಜೊತೆಗೂಡುವಂತೆ ಚೀನಾದಿಂದ ಮನವಿ, ಎನಿದು ವ್ಯಾಪಾರ ಸಮರ..?

ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸ್ತಿದ್ದ ಇಬ್ಬರು ಅರೆಸ್ಟ್ ..! 3 ಮೊಬೈಲ್ ಸೇರಿ 6.99 ಲಕ್ಷ ರೂ. ಜಪ್ತಿ..!

See also  ದರ್ಶನ್ ಬಳ್ಳಾರಿಗೆ ಶಿಫ್ಟ್ ಆಗುತ್ತಿದ್ದಂತೆ ಶಾಸ್ತ್ರಿ ಸಿನಿಮಾ ರೀ-ರಿಲೀಸ್..! ಕಾರಾಗೃಹದಲ್ಲಿ ಊಟಕ್ಕೆ ಚಿಕನ್, ಚಪಾತಿ, ಮುದ್ದೆ, ಸಾಂಬಾರ್, ಮಜ್ಜಿಗೆ..!
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget