ಕ್ರೈಂದೇಶ-ಪ್ರಪಂಚ

ಒಡಿಶಾದಲ್ಲಿ ಮತ್ತೊಂದು ಭೀಕರ ರೈಲು ದುರಂತ: ರೈಲ್ವೆ ಕೋಚ್‌ ಕೆಳಗೆ ಸಿಲುಕಿ ನಾಲ್ವರು ಸಾವು


ಭುವನೇಶ್ವರ್: ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿದ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದ ಕೆಲವೇ ದಿನಗಳ ಅಂತರದಲ್ಲಿ ಎಂಜಿನ್‌ ರಹಿತ ಗೂಡ್ಸ್ ರೈಲ್ವೆ ಕೋಚ್‌ ಅಡಿಗೆ ಸಿಲುಕಿ ನಾಲ್ವರು ಮೃತಪಟ್ಟಿದ್ದಾರೆ. ಬುಧವಾರ ಜಾಜ್‌ಪುರ-ಕಿಯೋಂಜಾರ್ ರಸ್ತೆ ನಿಲ್ದಾಣದ ಬಳಿ ಈ ಭಯಾನಕ ಘಟನೆ ನಡೆದಿದ್ದು, ನಾಲ್ವರು ಘಟನೆಯಲ್ಲಿ ಸಾವನಪ್ಪಿದ್ದಾರೆ. ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.


ರೈಲ್ವೆ ಗುತ್ತಿಗೆ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರು ಭಾರಿ ಮಳೆ ಮತ್ತು ಗಾಳಿಯ ಕಾರಣ ಎಂಜಿನ್‌ ರಹಿತ ರೈಲ್ವೆ ವ್ಯಾಗನ್‌ ಅಡಿಯಲ್ಲಿ ಆಶ್ರಯ ಪಡೆದಿದ್ದರು. ಇದ್ದಕ್ಕಿದ್ದಂತೆ ರೈಲ್ವೆ ವ್ಯಾಗನ್‌ ಚಲಿಸಲು ಆರಂಭಿಸಿದೆ. ಈ ವೇಳೆ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ನಾಲ್ಕು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ಕೋಚ್‌ ನಲ್ಲಿ ಮಳೆಗಾಲದ ನಿರ್ವಹಣೆಗೆ ಅಗತ್ಯ ವಸ್ತುಗಳನ್ನು ಇರಿಸಲಾಗಿತ್ತು ಎನ್ನಲಾಗಿದೆ.

Related posts

ಕೇರಳ ಸಿಎಂ ಪಿಣರಾಯಿ ವಿಜಯನ್‌ ಗೆ ಬೆದರಿಕೆ ಹಾಕಿದ್ಯಾರು? ಯಾರು ಈ 7ನೇ ತರಗತಿ ಬಾಲಕ?

ಅಯೋಧ್ಯೆಯ ರಾಮ ವಿಗ್ರಹ ಕೆತ್ತನೆಗೆ ಕರುನಾಡ ಶಿಲ್ಪಿಗಳು! ಸ್ವಲ್ಪ ವ್ಯತ್ಯಾಸವಾದರೂ ವಿಗ್ರಹಕ್ಕಾಗಿ 6 ತಿಂಗಳು ಕಾಯಬೇಕಾಗುತ್ತದೆ..!?

ಚುನಾವಣಾ ಫಲಿತಾಂಶ ನೋಡುತ್ತಲ್ಲೇ ಆಕ್ರೋಶಗೊಂಡು ಟಿ.ವಿ ಒಡೆದು ಹಾಕಿದ ರಾಷ್ಟ್ರೀಯ ಹಿಂದೂ ಪರಿಷತ್‌ ಅಧ್ಯಕ್ಷ..! ಇಲ್ಲಿದೆ ವೈರಲ್ ವಿಡಿಯೋ