ಕರಾವಳಿರಾಜಕೀಯವೈರಲ್ ನ್ಯೂಸ್

ಬಿಜೆಪಿಯ ಮತ್ತೋರ್ವ ಮಾಜಿ ಸಿಎಂ ಕಾಂಗ್ರೆಸ್ ಸೇರ್ತಾರಾ..? ಯಾರು ಕರಾವಳಿಯ ಆ ಮಾಜಿ ಕೇಂದ್ರ ನಾಯಕ?

243

ನ್ಯೂಸ್ ನಾಟೌಟ್: ಬಿಜೆಪಿಯ ಮತ್ತೋರ್ವ ಮಾಜಿ ಸಿಎಂ ಕಾಂಗ್ರೆಸ್ ಸೇರುತ್ತಾರೆ ಎಂಬ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್ ಸ್ಟೋಟಕ ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್ ಎಂಎಲ್​ಸಿ ಜಗದೀಶ್ ಶೆಟ್ಟರ್ ಹೇಳಿದ ಪ್ರಕಾರ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡರು ಕಾಂಗ್ರೆಸ್ ಗೆ ಬರುವ ವಿಚಾರ ಇದಾಗಿತ್ತು.

ಆ ಬಗ್ಗೆ ನನಗೆ ಸೂಕ್ತ ಮಾಹಿತಿ ಇಲ್ಲ ಹೀಗಂತ ಪಕ್ಷದ ಕೆಲವರ ನಡುವೆ ಮಾತುಕತೆಯಾಗಿದೆ ಎಂಬ ಬಗ್ಗೆ ಕೇಳಿದ್ದೇನೆ ಎಂದಿದ್ದಾರೆ. ಆದರೆ ಈ ಬಗ್ಗೆ ನಾನು ಅವರ ಸ‌ಂಪರ್ಕದಲ್ಲಿ ಇಲ್ಲ. ಸದಾನಂದಗೌಡರ ಜೊತೆಗೆ ನಾನು ಯಾವುದೇ ರೀತಿಯ ಮಾತನಾಡಿಲ್ಲ ಎಂದು ಶೆಟ್ಟರ್ ಹೇಳಿದ್ದಾರೆ.

ಈ ಹಿಂದೆ ಹಲವು ಭಾರಿ ತಮ್ಮ ಸ್ವಪಕ್ಷದ ನಾಯಕರ ವಿರುದ್ಧವೇ ಮಾಜಿ ಸಿಎಂ ಡಿ.ವಿ ಸದಾನಂದ ಗೌಡ ಬಹಿರಂಗವಾಗಿ ಹೇಳಿಕೊಂಡಿದ್ದರು, ಈಗ ಅದಕ್ಕೆ ಮತ್ತಷ್ಟು ಪುಷ್ಟಿ ದೊರಕಿದೆ.

ಉತ್ತರ ಕರ್ನಾಟಕ ಭಾಗದ ಪ್ರಮುಖ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಗೆ ಕರೆತರುವ ಪ್ರಯತ್ನದಲ್ಲಿ ಕಾಂಗ್ರೆಸ್ ಇರುವುದಂತು ನಿಜ ಎಂದಿದ್ದಾರೆ ಜಗದೀಶ್ ಶೆಟ್ಟರ್, ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಯನ್ನು ಕಾಂಗ್ರೆಸ್ ನ ಯಾವುದೇ ನಾಯಕರು ನೀಡಿಲ್ಲ.

See also  ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಸ್ವಚ್ಛತಾ ಕಾರ್ಯ ಆರಂಭ,45 ದಿನಗಳಲ್ಲಿ 66 ಕೋಟಿ ಜನ ಭಾಗಿ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget