ಕ್ರೈಂವೈರಲ್ ನ್ಯೂಸ್

ಅವಸರದಲ್ಲಿ ಇವಿಎಂ ಯಂತ್ರವನ್ನೇ ಬಿಟ್ಟು ಹೋದ ಅಧಿಕಾರಿಗಳು! ಅಧಿಕಾರಿಗಳ ಎಡವಟ್ಟಿಗೆ 700 ಮತಗಳು ಏನಾದವು?

143

ನ್ಯೂಸ್‌ ನಾಟೌಟ್‌:  ಚುನಾವಣಾ ಪ್ರಕ್ರಿಯೆ ಮುಗಿದ ನಂತರ ನಗರದ ಮತಗಟ್ಟೆಯೊಂದರಲ್ಲಿ ಮತ ಸಂಗ್ರಹಗೊಂಡಿದ್ದ ಇವಿಎಂ ಯಂತ್ರವನ್ನು ಅಧಿಕಾರಿಗಳು ತರಾತುರಿಯಲ್ಲಿ ಬಿಟ್ಟು ಹೋದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ನಗರದ ಸ್ವತಂತ್ರ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 168 ಮತ್ತು 169 ಮತಗಟ್ಟೆಯ ಪೈಕಿ 169ನೇ ಬೂತ್‌ನ ಇವಿಎಂ ಯಂತ್ರವನ್ನು ಚುನಾವಣಾಧಿಕಾರಿಗಳು ಮರೆತು ಬೂತ್‌ನಲ್ಲೇ ಬಿಟ್ಟು ಹೋಗಿದ್ದರು.

ಅಧಿಕಾರಿಗಳು ತೆರಳಿದ ನಂತರ ಮತಗಟ್ಟೆಯಿಂದ ತೆರಳಲು ಸಿದ್ದರಾಗಿದ್ದ ಪಕ್ಷಗಳ ಏಜೆಂಟರ ಕಣ್ಣಿಗೆ ಅಧಿಕಾರಿಗಳು ಮರೆತು ಹೋಗಿದ್ದ 700 ಮತ ಸಂಗ್ರಹಗೊಂಡಿದ್ದ ಇವಿಎಂ ಮತಪೆಟ್ಟಿಗೆ ಮತ್ತು ವಿವಿ ಪ್ಯಾಟ್‌ ಕಂಡಿದೆ. ಕೂಡಲೇ ಅಧಿಕಾರಿಗಳಿಗೆ ಕರೆ ಮಾಡಲಾಗಿದ್ದು, ತಕ್ಷಣ ಅವರು ಮರಳಿ ಬಂದು ಮತಯಂತ್ರವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ವರದಿ ತಿಳಿಸಿದೆ.

See also  ಕಲ್ಲುಗುಂಡಿ: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಹಠಾತ್ ಕುಸಿದು ಬಿದ್ದು ಸಾವು, ಮನೆಗೆ ಹೋಗುತ್ತಿದ್ದ ವ್ಯಕ್ತಿಗೆ ಆಗಿದ್ದೇನು..?
  Ad Widget   Ad Widget   Ad Widget   Ad Widget   Ad Widget   Ad Widget