ಕರಾವಳಿಕ್ರೈಂವೈರಲ್ ನ್ಯೂಸ್

ಆ 9 ವಿದ್ಯಾರ್ಥಿಗಳು ಕಾಡಿನಲ್ಲಿ ನಿಗೂಢವಾಗಿ ಕಣ್ಮರೆಯಾದದ್ದೇಗೆ..? ಚಾರಣಕ್ಕೆಂದು ಹೋದವರನ್ನು ರಕ್ಷಿಸಿದ್ದೇಗೆ ಅರಣ್ಯ ಇಲಾಖೆ?

ನ್ಯೂಸ್ ನಾಟೌಟ್ : ಕಾಡಿನಲ್ಲಿ ಕಣ್ಮರೆಯಾಗಿದ್ದ ಬೆಳಗಾವಿ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳನ್ನು (Students) ಕರ್ನಾಟಕ ಹಾಗೂ ಗೋವಾ ಅರಣ್ಯ ಇಲಾಖೆ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಿದ ಘಟನೆ ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಜಲ್ವಾಣಿ ಫಾಲ್ಸ್ ನ ಅರಣ್ಯದಲ್ಲಿ ನಡೆದಿದೆ.

ಚಾರಣಕ್ಕೆಂದು ಹೋಗಿ ಕಣ್ಮರೆಯಾಗಿದ್ದ 9 ವಿದ್ಯಾರ್ಥಿಗಳು ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಜಲ್ವಾಣಿ ಫಾಲ್ಸ್ (Jalwani Falls) ನೋಡುವ ಸಲುವಾಗಿ ಕಣಕುಂಬಿ ಅರಣ್ಯ ಪ್ರದೇಶದ ಮೂಲಕ ತೆರಳಿದ್ದರು ಎನ್ನಲಾಗಿದೆ.

ಈ ಯುವಕರು ಪಾರವಾಡ ಗ್ರಾಮದಿಂದ ಮೂರು ಕಿಲೋಮೀಟರ್ ಬೈಕ್‌ನಲ್ಲಿ ತೆರಳಿದ್ದು, ಬಳಿಕ ಕಾಲು ದಾರಿಯಲ್ಲೇ ಜಲ್ವಾಣಿ ಫಾಲ್ಸ್‌ಗೆ ತೆರಳಿದ್ದಾರೆ. ಶುಕ್ರವಾರ ಸಂಜೆ (ಡಿ.29) ಮರಳಿ ಬರುವ ವೇಳೆ ದಾರಿ ತಿಳಿಯದೇ ಯುವಕರು ದಟ್ಟ ಕಾಡಿನಲ್ಲಿ ಕಣ್ಮರೆಯಾದ ಘಟನೆ ಬೆಳಕಿಗೆ ಬಂದಿದೆ.

ತಕ್ಷಣವೇ ಯುವಕರು ಸ್ನೇಹಿತರಿಗೆ ಫೋನ್ ಮಾಡಿ ಕಾಡಿನಲ್ಲಿ ಕಣ್ಮರೆಯಾಗಿರುವ ಕುರಿತು ಮಾಹಿತಿ ತಿಳಿಸಿದ್ದಾರೆ. ಇದಾದ ಬಳಿಕ ರಾತ್ರಿಯಿಡೀ ಕರ್ನಾಟಕ ಹಾಗೂ ಗೋವಾ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ 30 ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ವಿದ್ಯಾರ್ಥಿಗಳನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಕಾಡಿನಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ. ಇನ್ನು ಅಕ್ರಮ ಅರಣ್ಯ ಪ್ರದೇಶ ಪ್ರವೇಶ ಆರೋಪದಡಿ ಗೋವಾ ಅರಣ್ಯ ಇಲಾಖೆಯಿಂದ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

https://newsnotout.com/2023/12/shabari-male-d/

Related posts

ತಲೆಕೆಳಗಾದ ದರೋಡೆಕೋರರ ಪ್ಲಾನ್..! ದಂಪತಿಯ ದೈರ್ಯಕ್ಕೆ ಎಲ್ಲೆಡೆ ಪ್ರಶಂಸೆ… ಇಲ್ಲಿದೆ ವೈರಲ್ ವಿಡಿಯೋ

ಉಪ್ಪಿನಂಗಡಿ: ಮಗಳ ಮದುವೆಗೆ ಚಿನ್ನಾಭರಣ ಖರೀದಿಸಲು ತೆರಳುತ್ತಿದ್ದ ವೇಳೆ 10 ಲಕ್ಷ ರೂ ದರೋಡೆ ಪ್ರಕರಣ, ಆರೋಪಿ ಪೊಲೀಸ್ ಬಲೆಗೆ

ಸುಳ್ಯ ಕೆವಿಜಿ ಎನ್ ಎಂಸಿ ಯಲ್ಲಿ ವಿಜ್ಞಾನ ಸಂಘದ ವತಿಯಿಂದ ವಿಜ್ಞಾನ ಮಾದರಿ ಸ್ಪರ್ಧೆ ಮತ್ತು ಪ್ರದರ್ಶನ ಕಾರ್ಯಕ್ರಮ