ಕ್ರೈಂರಾಜ್ಯವೈರಲ್ ನ್ಯೂಸ್

ಮೇಕೆ ಮೇಯಿಸುತ್ತಿದ್ದ ಮಹಿಳೆಯನ್ನು ಹೊತ್ತೊಯ್ದು ಹುಲಿ..! ಅರಣ್ಯ ವೀಕ್ಷಣೆಯ ಟವರ್ ಮೇಲೆ ಮೃತದೇಹ ಪತ್ತೆ..!

262

ನ್ಯೂಸ್‌ ನಾಟೌಟ್‌: ಮೇಕೆಗಳನ್ನು ಮೇಯಿಸುತ್ತಿದ್ದ ಮಹಿಳೆಯ ಮೇಲೆ ಹುಲಿ ದಾಳಿ ನಡೆಸಿ ಮಹಿಳೆಯನ್ನು ಹೊತ್ತೊಯ್ದ ಘಟನೆ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಮೂರ್ಬಾಂದ್ ಬೆಟ್ಟದ ಬಳಿ ಶನಿವಾರ ಸಂಜೆ ನಡೆದಿದೆ.

ಮಹಿಳೆಯ ಮೃತದೇಹ ಅರಣ್ಯ ವೀಕ್ಷಣೆಯ ಟವರ್ ಮೇಲೆ ಭಾನುವಾರ(ಮೇ.೨೬) ಬೆಳಗ್ಗೆ ದೊರೆತಿದೆ. ಎನ್.ಬೇಗೂರು ಸಮೀಪದ ಮಾಳದ ಹಾಡಿ ನಿವಾಸಿ ಚಿಕ್ಕಿ (48) ಎಂಬಾಕೆ ಹುಲಿ ದಾಳಿಗೆ ಸಿಲುಕಿ ಮೃತಪಟ್ಟವರು. ಮೂರ್ಬಾಂದ್ ಬೆಟ್ಟದ ಸಮೀಪ ಮೇಕೆ ಮೇಯಿಸುತ್ತಿದ್ದಾಗ ಘಟನೆ ಸಂಭವಿಸಿದೆ. ಮಹಿಳೆಯೊಂದಿಗೆ ಕುರಿ ಮೇಯಿಸುತ್ತಿದ್ದ ಸಹಚರರು ಗ್ರಾಮಕ್ಕೆ ತೆರಳಿ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಎನ್.ಬೇಗೂರು ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Click 👇

https://newsnotout.com/2024/05/neonotals-are-nomore-by-fire
https://newsnotout.com/2024/05/voice-modulation-app-and-kannada-news
See also  'ಡ್ರೋನ್' ಪ್ರತಾಪ್ ವಿರುದ್ಧ ಮತ್ತೊಂದು ವಂಚನೆ ಕೇಸ್..! ಉದ್ಯಮಿ ಕೈಯಿಂದ 80 ಲಕ್ಷ ರೂ ಪಡೆದಿದ್ನಾ ಪ್ರತಾಪ್..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget