Latestಕ್ರೀಡೆ/ಸಿನಿಮಾಫ್ಯಾಷನ್

ಅಬ್ಬಬ್ಬಾ , ವೈರಲ್‌ ಬೆಡಗಿ ಮೋನಾಲಿಸಾಳ ಕಥೆ ಇದು:ವಿಮಾನದಲ್ಲಿ ಪ್ರಯಾಣ,೭ ಸ್ಟಾರ್‌ ಹೊಟೇಲ್‌ನಲ್ಲಿ ಡಿನ್ನರ್‌!!

1.1k
Spread the love

ನ್ಯೂಸ್‌ ನಾಟೌಟ್‌ : ಕುಂಭ ಮೇಳದಲ್ಲಿ ವೈರಲ್‌ ಆದ ಸುಂದರಿ ಮೋನಾಲೀಸಾಗೆ ಭಾರಿ ಅವಕಾಶಗಳ ಸುರಿಮಳೆ ಹರಿದು ಬರುತ್ತಿದೆ. ಇದೇ ಮೊದಲ ಬಾರಿಗೆ ಎಂಬಂತೆ ಈಕೆ ವಿಮಾನದಲ್ಲಿ ಪ್ರಯಾಣಿಸಿದ್ದಾಳೆ. 7 ಸ್ಟಾರ್ ಹೋಟೆಲ್‌ನಲ್ಲಿ ಊಟ ಸವಿದಿದ್ದಾಲೆ. ಸದ್ಯ ಈಕೆಯ ಹವಾ ನೋಡಿದ್ರೆ ಇನ್ನೇನು ಕೆಲವೇ ದಿನಗಳಲ್ಲಿ ಬಾಲಿವುಡ್‌ ನಟಿಯರನ್ನು ಮೀರಿಸುವ ನಟಿಯಾಗುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ ಎನ್ನುವಂತಾಗಿದೆ. 

ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಾಟ ಮಾಡುತ್ತಾ, ಮೀಡಿಯಾದವರ ಕಣ್ಣಿಗೆ ಬಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದ ಮೊನಾಲಿಸಾ ತನ್ನ ಕಣ್ಣಗಳ ಮೂಲಕ ಎಲ್ಲರ ಗಮನ ಸೆಳದಿದ್ದಳು. ಅದರ ಜೊತೆಗೆ ಗಮನ ಸೆಳೆದಿದ್ದು, ನಿದ್ದೆಗೆಡಿಸಿ, ರಾತ್ರೋರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದ್ದಳು. ಇದೀಗ ಮೊನಾಲಿಸಾ ನಿರ್ದೇಶಕ ಸನೋಜ್ ಮಿಶ್ರಾ ಅವರ ʻದಿ ಡೈರಿ ಆಫ್ ಮಣಿಪುರ್’ ಚಿತ್ರಕ್ಕಾಗಿ ಸಹಿ ಹಾಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸನೋಜ್ ಮಿಶ್ರಾ ಮೊನಾಲಿಸಾಗೆ ನಟನಾ ತರಬೇತಿ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಮೊನಾಲಿಸಾ ಅವರ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಚಿತ್ರದ ನಿರ್ದೇಶಕರು ಮೊನಾಲಿಸಾಳಿಗೆ ಎಬಿಸಿ ಕಲಿಸುತ್ತಿರುವುದು ಕಂಡುಬಂದಿದೆ. ಇತ್ತೀಚೆಗೆ ಮೊನಾಲಿಸಾ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅವರು ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ಮೊನಾಲಿಸಾ ಇಂದು ಚಿತ್ರದ ನಿರ್ದೇಶಕ ಸನೋಜ್ ಮಿಶ್ರಾ ಅವರೊಂದಿಗೆ ಇಂದೋರ್‌ನಿಂದ ಬೆಂಗಳೂರಿಗೆ ತಮ್ಮ ಮೊದಲ ವಿಮಾನ ಪ್ರಯಾಣ ಮಾಡಿದರು. 

See also  ಸಂಬಂಧದಲ್ಲಿ ಅಣ್ಣ-ತಂಗಿಯಾಗಿದ್ದಾರೆಂದು ಲವ್ ಮಾಡಿದ್ದಕ್ಕೆ ವಿರೋಧ,ಮನೆಯವರು ಒಪ್ಪದಿರೋದಕ್ಕೆ ಬದುಕನ್ನೇ ಅಂತ್ಯ ಮಾಡಿಕೊಂಡ ಜೋಡಿ..!
  Ad Widget   Ad Widget   Ad Widget