ಕ್ರೈಂದೇಶ-ವಿದೇಶಸುಳ್ಯ

ಮಹಿಳೆಗೆ ಮದ್ಯ ಕುಡಿಸಿ, ಹಾಡಹಗಲೇ ಫುಟ್ಪಾತ್ ನಲ್ಲಿ ಅತ್ಯಾಚಾರ..! ತಡೆಯದೆ ವಿಡಿಯೋ ಮಾಡುತ್ತಾ ನಿಂತ ಜನ..!

289

ನ್ಯೂಸ್ ನಾಟೌಟ್ : ಮಹಿಳೆಗೆ ಮದ್ಯ ಕುಡಿಸಿ ಹಾಡಹಗಲೇ ಫುಟ್ಪಾತ್ ನಲ್ಲಿ ಅತ್ಯಾಚಾರ ಮಾಡಿರುವ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ಘಟನೆ ವರದಿಯಾಗಿದ್ದು, ಇಲ್ಲಿನ ಕೊಯ್ಲಾ ಫಾಟಕ್ ಪ್ರದೇಶದಲ್ಲಿ ದುಷ್ಕರ್ಮಿಯೋರ್ವ ಮಹಿಳೆಗೆ ಮದ್ಯಪಾನ ಮಾಡಿಸಿ ಆಕೆಯನ್ನು ಫುಟ್ ಪಾತ್ ಮೇಲೆ ಹಗಲು ಹೊತ್ತಿನಲ್ಲೇ ಅತ್ಯಾಚಾರವೆಸಗಿದ್ದಾನೆ.
ದುಷ್ಕರ್ಮಿಯ ಕೃತ್ಯವನ್ನು ದಾರಿಹೋಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಮಾತ್ರವಲ್ಲದೇ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಆದರೂ ಇದನ್ನು ತಡೆಯುವ ಪ್ರಯತ್ನ ಮಾಡಿಲ್ಲ.

https://twitter.com/preetikaur69/status/1831969531163730070?ref_src=twsrc%5Etfw%7Ctwcamp%5Etweetembed%7Ctwterm%5E1831969531163730070%7Ctwgr%5E3011f5f72be895c85e07015403a3067cbe06d48d%7Ctwcon%5Es1_&ref_url=https%3A%2F%2Fwww.kannadaprabha.com%2Fnation%2F2024%2FSep%2F06%2Fman-gets-woman-drunk-rapes-her-on-roadside-in-madhya-pradeshs-ujjain-arrested

ಆರೋಪಿಯು ಮಹಿಳೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ, ಆಕೆಗೆ ಮದ್ಯ ಕುಡಿಸಿ ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಆರೋಪಿ ಅದೇ ರಸ್ತೆಯಲ್ಲಿ ತಳ್ಳುಗಾಡಿಯಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಎಸ್ಪಿ ಪ್ರದೀಪ್ ಶರ್ಮಾ ತಂಡವನ್ನು ರಚಿಸಿ ಆರೋಪಿಯನ್ನು ಬಂಧಿಸಲು ಸೂಚನೆ ನೀಡಿದ್ದರು. ಅದರಂತೆ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Click

https://newsnotout.com/2024/09/cinema-shooting-light-man-nomore-knnada-news-yograj-bhat-direction/
https://newsnotout.com/2024/09/ettina-hole-cm-siddaramayya-vartha-ilake-kannada-news/
https://newsnotout.com/2024/09/fishing-in-karavara-boat-under-storm-in-sea-kannada-news-malpe/
https://newsnotout.com/2024/09/muslim-kannada-news-biriyani-in-tiffin-box-school-principal/
See also  ಗಂಡನೇ ಹೆಂಡತಿಯನ್ನು ಹನಿಟ್ರ್ಯಾಪ್ ಗೆ ಕಳುಹಿಸಿದ್ದೆಲ್ಲಿ..? ಕೋಟ್ಯಧಿಪತಿಗೆ ಹಾಕಿದ ಗಾಳ ತಪ್ಪಿದ್ದೇಗೆ? ಇಲ್ಲಿದೆ ಸಿನಿಮೀಯ ಘಟನೆ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget