ಕ್ರೈಂಬೆಂಗಳೂರು

ಫ್ಲೈ ಓವರ್ ನಿಂದ ಜಿಗಿದು ಗುತ್ತಿಗೆ ನೌಕರ ಆತ್ಮಹತ್ಯೆ..! 3-4 ತಿಂಗಳಿನಿಂದ ಕರ್ನಾಟಕ ವಿದ್ಯುತ್ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಯುವಕ

ನ್ಯೂಸ್ ನಾಟೌಟ್: ಬೆಂಗಳೂರಿನ ನಾಯಂಡಹಳ್ಳಿ ಫ್ಲೈಓವರ್ ಮೇಲಿನಿಂದ ಜಿಗಿದು ಕರ್ನಾಟಕ ವಿದ್ಯುತ್ ಕಾರ್ಖಾನೆಯ ಗುತ್ತಿಗೆ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನವೀನ್ ಕುಮಾರ್ (30) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ತನ್ನ ಬೈಕನ್ನ ಫ್ಲೈಓವರ್ ಮೇಲೆ ಪಾರ್ಕಿಂಗ್ ಮಾಡಿ ಏಕಾಏಕಿ ಕೆಳಗೆ ಜಿಗಿದಿದ್ದಾನೆ.

ಸದ್ಯ ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಕಳೆದ 3-4 ತಿಂಗಳಿನಿಂದ ಕರ್ನಾಟಕ ವಿದ್ಯುತ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ನವೀನ್, ಕೆಲಸಕ್ಕೆ ಹೋಗುವುದಾಗಿ ಹೇಳಿ ಹೊರಟಿದ್ದಾನೆ.

ಬಳಿಕ ಬೈಕ್ ಪಾರ್ಕ್ ಮಾಡಿ, ಫ್ಲೈಓವರ್‌ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಆತ್ಮಹತ್ಯೆ ಮಾಡಿಕೊಂಡ ನವೀನ್ 2 ತಿಂಗಳ ಹಿಂದೆ ಮದುವೆಯಾಗಿದ್ದ. ಕೆಲಸದ ಮೇಲೆ ಹೋಗಿ ಬರ್ತೀನಿ ಅಂತಾ ಏಪ್ರಿಲ್ 11ರಂದು ಮನೆಯಿಂದ ಹೊರಟಿದ್ದ ನವೀನ್‌, ಇಂದು (ಏ.12) ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Related posts

ಪುತ್ತೂರು : 8 ತಿಂಗಳಿನಿಂದ ತರೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಸೆರೆ ! ಇವನ ಮೇಲಿತ್ತು ಹಲವು ಪ್ರಕರಣ !

ಉಚಿತ ಬಸ್ ಪ್ರಯಾಣಕ್ಕೆ ನಕಲಿ ಆಧಾರ್ ಕಾರ್ಡ್ ಬಳಸಿ ಸಿಕ್ಕಿಬಿದ್ದ ಮಹಿಳೆ..! ಕಂಡೆಕ್ಟರ್‌ ಮಾಡಿದ್ದೇನು ಗೊತ್ತಾ?

ಇಂದಿರಾನಗರ 100 ಅಡಿ ರಸ್ತೆ ಅವ್ಯವಸ್ಥೆ: ‘ಕೂ’ ನಲ್ಲಿ ಸಾರ್ವಜನಿಕರ ಆಕ್ರೋಶ