ಕ್ರೈಂಬೆಂಗಳೂರುರಾಜಕೀಯವೈರಲ್ ನ್ಯೂಸ್

ಬೆಂಗಳೂರಿಗೂ ಹಬ್ಬಿದ ಧ್ವಜ ಗಲಾಟೆ..! ಹಸಿರು ಬಾವುಟ ತೆಗೆದು ರಾಷ್ಟ್ರಧ್ವಜ ನೆಟ್ಟ ಪೊಲೀಸರು..!

ನ್ಯೂಸ್ ನಾಟೌಟ್: ಹನುಮಧ್ವಜ ಬಳಿಕ ಇದೀಗ ಹಸಿರು ಬಾವುಟ ತೆರವು ವಿವಾದವಾಗಿದೆ. ಮಂಡ್ಯದ ಕೆರಗೋಡು ಘಟನೆಯ ಬಳಿಕ ಬೆಂಗಳೂರಿನ ಶಿವಾಜಿನಗರಕ್ಕೂ ಧ್ವಜದ ವಿಚಾರದಲ್ಲಿ ಗಲಾಟೆ ಶುರುವಾಗಿದೆ.

ಶಿವಾಜಿನಗರದ (Shivajinagar) ಚಾಂದಿನಿ ಚೌಕ್‍ನ ಬಳಿಯಲ್ಲಿ ಬಿಬಿಎಂಪಿ ಅಳವಡಿಕೆ ಮಾಡಿರುವ ವಿದ್ಯುತ್ ಕಂಬದಲ್ಲಿ ಹಸಿರು ಧ್ವಜವನ್ನು ಹಾರಿಸಲಾಗಿತ್ತು. ಇದರ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುವ ಕೆಲಸ ಶುರು ಮಾಡಿದ ಯುವಕರು, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಲಾಗಿತ್ತು, ಈ ಬಗ್ಗೆ ಯತ್ನಾಳ್ ಟ್ವೀಟ್ ಮಾಡಿದ್ದು ವಿವಾದಕ್ಕೆ ತಿರುಗಿತು.

ಇದರಿಂದ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ತಕ್ಷಣವೇ ಬಂದು, ಬಳಿಕ ಸ್ಥಳೀಯರನ್ನು ಬಳಸಿಕೊಂಡು ಹಸಿರು ಧ್ವಜ ತೆರವು ಮಾಡೋ ಕೆಲಸ ಮಾಡಿದರು. ನಂತರ ಅದೇ ಜಾಗದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿವಹಿಸಿದ್ದಾರೆ.

ಕಳೆದ 30 ವರ್ಷಗಳಿಂದ ದರ್ಗಾದ ಬಾವುಟ ಹಾಕಲಾಗಿತ್ತು. ಪೊಲೀಸರು ಬಾವುಟ ಹಾಕಿರುವ ಬಗ್ಗೆ ಮಾಹಿತಿ ಕೇಳಿದ್ರು. ಬಳಿಕ ನೀವೇ ಬಾವುಟವನ್ನ ತೆರವುಗೊಳಿಸುವಂತೆ ಸೂಚಿಸಿದ್ರು. ಪೊಲೀಸರ ಸೂಚನೆಯಂತೆ ಹಸಿರು ಬಾವುಟ ತೆರವುಗೊಳಿಸಿ ರಾಷ್ಟ್ರೀಯ ಬಾವುಟವನ್ನ ಹಾಕಲಾಗಿದೆ ಎಂದು ಸ್ಥಳಿಯ ಮುಸ್ಲಿಂ ಮುಖಂಡರು ತಿಳಿಸಿದ್ದಾರೆ.

Related posts

ಮಂಗಳೂರು: ಬೈಕ್ ಸವಾರನಿಗೆ ದಿಢೀರ್ ಅಡ್ಡ ಬಂದ ಶ್ವಾನ..! ಡಿವೈಡರ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

ಯಡಿಯೂರಪ್ಪರ ಮಗ ವಿಜೆಯೇಂದ್ರಗೆ ಮಂತ್ರಿ ಸ್ಥಾನ ಸಿಗುವುದೇ? ಈ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿದ್ದೇನು?

ಭಾರಿ ಚರ್ಚೆಗೆ ಕಾರಣವಾದ ಭವಾನಿ ರೇವಣ್ಣರವರ 1.5 ಕೋಟಿ ರೂ.ಕಾರು ಯಾರದ್ದು?ಈ ದುಬಾರಿ ಕಾರಿನ ಹಿಂದಿರುವ ಕಥೆ ಏನು?ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಗರಂ ಆಗಿದ್ಯಾಕೆ?