ಕರಾವಳಿ

ಮೀನುಗಾರಿಕೆಗೆ ತೆರಳಿದ್ದ ಬೋಟ್‌ನಲ್ಲಿ ಅಗ್ನಿ ಅವಘಡ, ಸಮುದ್ರದ ಮಧ್ಯೆ ಮೀನುಗಾರರು ಬಚಾವಾದದ್ದು ಹೇಗೆ..?

ನ್ಯೂಸ್‌ ನಾಟೌಟ್‌: ಮಂಗಳೂರಿನಿಂದ ಮುಂಜಾನೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್‌ನಲ್ಲಿ ಸಮುದ್ರದ ಮಧ್ಯೆ ಅಗ್ನಿ ಅವಘಡ ಸಂಭವಿಸಿದೆ. ಬೋಟ್‌ನಲ್ಲಿ ಹತ್ತು ಮಂದಿ ಮೀನುಗಾರರಿದ್ದರು. ಅವರನ್ನು ಇತರ ಬೋಟ್‌ನವರು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಭಾನುವಾರ ಹುಸೈನ್ ಎಂಬವರ ಮಾಲೀಕತ್ವದ ಸಫವಿ ಹೆಸರಿನ ಬೋಟ್‌ನಲ್ಲಿ ಹತ್ತು ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಮಂಗಳೂರು ಧಕ್ಕೆಯಿಂದ ಸುಮಾರು 88 ನಾಟಿಕಲ್ ದೂರದಲ್ಲಿರುವಾಗ ಸೋಮವಾರ ಮುಂಜಾನೆ ಬೋಟ್‌ನಲ್ಲಿ ಏಕಾಏಕಿ ಅಗ್ನಿ ಅವಘಡ ಸಂಭವಿಸಿದೆ. ತಕ್ಷಣ ಇತರ ಬೋಟ್‌ನಲ್ಲಿದ್ದ ಮೀನುಗಾರರು ಸಫವಿ ಬೋಟ್‌ನಲ್ಲಿದ್ದವರನ್ನು ರಕ್ಷಿಸಿದ್ದು, ಸದ್ಯ ಅಪಾಯದಿಂದ ಬಚಾವಾಗಿದ್ದಾರೆ ಎಂದು ತಿಳಿದು ಬಂದಿದೆ.

Related posts

ಸುಳ್ಯ:ಕೆವಿಜಿ ಮೆಡಿಕಲ್ ಕಾಲೇಜಿನ ಡಯಾಲಿಸಿಸ್ ಘಟಕಕ್ಕೆ ನೂತನ 4 ಮೆಷಿನ್‌ಗಳ ಸೇರ್ಪಡೆ!

ದಕ್ಷಿಣ ಕನ್ನಡ: ಚರ್ಚ್ ಪಾದ್ರಿ ವೃದ್ಧನ ಮೇಲೆ ಹಲ್ಲೆ ನಡೆಸಿದ್ದೇಕೆ..? ಪೊಲೀಸ್ ಠಾಣೆಗೆ ದೂರು

ಕುಡಿದ ಮತ್ತಿನಲ್ಲಿ ಹೆಂಡತಿಯ ತಲೆಗೆ ಹೊಡೆದು ಮನೆಯಿಂದ ಹೊರಗೆ ತಳ್ಳಿದ್ದ ಪತಿ..!, ಬೆಳಗ್ಗೆ ನಿದ್ದೆಯಿಂದ ಎದ್ದು ನೋಡುವಾಗ ಅಂಗಳದಲ್ಲೇ ಬಿದ್ದಿತ್ತು ಶವ