ಕರಾವಳಿಕ್ರೈಂವೈರಲ್ ನ್ಯೂಸ್

ಮೀನಿಗೆ ಹಾಕಲು ಕೊಂಡುಹೋದ ಬಲೆಗೆ ತಾನೇ ಸಿಲುಕಿದ್ದೇಗೆ..? ಮುಂಜಾನೆ ಒಬ್ಬಂಟಿಯಾಗಿ ಸಮುದ್ರಕ್ಕೆ ಹೋದವ ಮತ್ತೆ ಬರಲೇ ಇಲ್ಲ..!

262

ನ್ಯೂಸ್ ನಾಟೌಟ್: ದೋಣಿಯಲ್ಲಿ ಮೀನುಗಾರಿಕೆ ನಡೆಸುತಿದ್ದ ವೇಳೆ ಮೀನು ಹಿಡಿಯಲು ಹಾಕಿದ ಬಲೆಗೆ ಸಿಕ್ಕಿಹಾಕಿಕೊಂಡ ಮೀನುಗಾರ ರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ(ಮಾ.1) ಮುಂಜಾನೆ ಉಡುಪಿಯ ಕಾಪು ಕಡಲಿನಲ್ಲಿ ನಡೆದಿದೆ.

ಮೃತ ಪಟ್ಟ ಮೀನುಗಾರರನ್ನು ಕಾಪು ಪೊಲಿಪುವಿನ ಕಿಶೋರ(27) ಎಂದು ಗುರುತಿಸಲಾಗಿದೆ. ಮೀನುಗಾರಿಕೆ ವೃತ್ತಿ ಮಾಡುವ ಕಿಶೋರ್ ಪ್ರತಿದಿನ ಮುಂಜಾನೆ 4:00ಗಂಟೆಗೆ ಮನೆಯಿಂದ ಮೀನು ಹಿಡಿಯಲು ಒಬ್ಬರೇ ಸಮುದ್ರಕ್ಕೆ ಹೋಗಿ ತನ್ನ ಕಾಯಕ್ ದೋಣಿಯಲ್ಲಿ ಮೀನು ಹಿಡಿಯುತಿದ್ದರು ಎನ್ನಲಾಗಿದೆ.

ಶುಕ್ರವಾರ ಮುಂಜಾನೆ ಸಹ 4:30ಕ್ಕೆ ಮೀನು ಹಿಡಿಯಲು ತೆರಳಿದ್ದ ಕಿಶೋರ್ ದೋಣಿ ಸಮುದ್ರದ ನೀರಿನಲ್ಲಿ ಖಾಲಿಯಾಗಿ ತೇಲುತ್ತಿರುವುದಾಗಿ 7:30ರ ಸುಮಾರಿಗೆ ಭರತ್ ಎಂಬವರು ಕಿಶೋರ್ ಪತ್ನಿ ಪವಿತ್ರರಿಗೆ ತಿಳಿಸಿದ್ದರು. ತಕ್ಷಣ ಪವಿತ್ರ ಮನೆಯವರೊಂದಿಗೆ ಸಮುದ್ರ ಕಿನಾರೆಗೆ ಬಂದು ಭರತ್ ಹಾಗೂ ಇತರರ ಸಹಾಯದಿಂದ ಬೋಟ್ ಬಳಿ ಹೋಗಿ ನೋಡಿದಾಗ ಬೋಟ್‌ನ ಪಕ್ಕದಲ್ಲಿ ಮೀನು ಹಿಡಿಯಲು ಹಾಕಿದ ಬಲೆಗೆ ಕಿಶೋರ ಸಿಕ್ಕಿ ಹಾಕಿಕೊಂಡು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ಕಂಡುಬಂದಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಸುಳ್ಯ:ಇಂದು ಬೆಳ್ಳಂಬೆಳಗ್ಗೆ ನಗರದಲ್ಲಿ ಅಳವಡಿಸಲಾಗಿದ್ದ ಸೌಜನ್ಯ ಪರ ಬ್ಯಾನರ್‌ಗಳ ತೆರವು,ನಗರ ಪಂಚಾಯತ್ ಅಧಿಕಾರಿಗಳ ಕಾರ್ಯಾಚರಣೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget