ಕರಾವಳಿಕ್ರೈಂ

ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ಬೋಟ್‌ನಿಂದ ಬಿದ್ದು ಸಾವು

342

ನ್ಯೂಸ್‌ ನಾಟೌಟ್‌: ಮೀನುಗಾರಿಕೆಗೆ ತೆರಳಿದ್ದ ಮೀನುಗಾರನೊಬ್ಬ ಆಯತಪ್ಪಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಮೀನುಗಾರನನ್ನು ರಾಜನ್‌ (32) ಎಂದು ಗುರುತಿಸಲಾಗಿದೆ. ಈತ ತಮಿಳುನಾಡು ರಾಮೇಶ್ವರ ರಾಮನಗರ ಮಹಾಪುರಂ ನಿವಾಸಿ ತುತ್ರಿಯನ್‌ ಎಂಬವರ ಮೀನುಗಾರಿಕಾ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ರಾಜನ್‌ ಅವರು ಮೇ 1ರಂದು ರಾತ್ರಿ ಬೋಟ್‌ನಲ್ಲಿ ಮಲ್ಪೆಯಿಂದ ಕೆಲಸಗಾರರೊಂದಿಗೆ ಹೊರಟು ಕಟಪಾಡಿಯ ಹತ್ತಿರ ತಲುಪಿದಾಗ ಬೋಟ್‌ನಲ್ಲಿದ್ದ ಅವರು ಹಿಂಬದಿಯ ತುದಿಯಲ್ಲಿ ನಿಂತುಕೊಂಡು ಮೂತ್ರ ಮಾಡುತ್ತಿದ್ದ ವೇಳೆ ಆಯತಪ್ಪಿ ಬೋಟಿನಿಂದ ಸಮುದ್ರಕ್ಕೆ ಬಿದ್ದಿದ್ದರು.

ಇನ್ನು ತೀವ್ರ ಹುಡುಕಾಟದ ಬಳಿಕ ಮೇ 5ರಂದು ರಾಜನ್‌ ಅವರ ಮೃತದೇಹ ಕಾಪು ಬೀಚ್‌ನಲ್ಲಿ ದೊರಕಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಬೆಳ್ಮಣ್‌ ,ಮಿಯ್ಯಾರು, ಮಾಳದಲ್ಲಿ ಸುನಿಲ್ ಕುಮಾರ್ ಬಿರುಸಿನ ಚುನಾವಣಾ ಪ್ರಚಾರ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget