ಕರಾವಳಿಕ್ರೈಂ

ಮೀನಿಗೆ ಬಲೆ ಹಾಕುತ್ತಿದ್ದ ಮೀನುಗಾರ ಸಮುದ್ರಕ್ಕೆ ಬಿದ್ದು ಸಾವು

ನ್ಯೂಸ್‌ ನಾಟೌಟ್:  ಸಮುದ್ರದಲ್ಲಿ ಮೀನಿಗೆ ಬಲೆ ಹಾಕುತ್ತಿದ್ದ ಮೀನುಗಾರನೋರ್ವ ಆಯತಪ್ಪಿ ನೀರಿಗೆ ಬಿದ್ದು ಮುಳುಗಿ ಮೃತಪಟ್ಟ ಘಟನೆ ಮಂಗಳೂರಲ್ಲಿ ಮಂಗಳವಾರ ನಡೆದಿದೆ.

ಮೃತ ಮೀನುಗಾರನನ್ನು ಜಯರಾಜ್ (46 ವರ್ಷ) ಎಂದು ಗುರುತಿಸಲಾಗಿದೆ. ಮೀನುಗಾರ ಬಲೆ ಹಾಕುತ್ತಿದ್ದಾಗ ಹಾಕಿದ ಬಲೆ ಕಾಲಿಗೆ ಸಿಲುಕಿದ್ದಲ್ಲದೆ, ಬೃಹತ್ ತೆರೆ ಅಪ್ಪಳಿಸಿದಾಗ ಆಯತಪ್ಪಿ ನೀರಿಗೆ ಬಿದ್ದು ಮುಳುಗಿದ್ದಾರೆ ಎನ್ನಲಾಗಿದೆ. ತಕ್ಷಣ ಸಹ ಮೀನುಗಾರರು ಸ್ಥಳೀಯರಿಗೆ ಮಾಹಿತಿ ತಿಳಿಸಿದ್ದರು. ನೆರವಿಗೆ ಬಂದ ಸ್ಥಳೀಯರು, ಜಯರಾಜ್‌ನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ, ಮಗಳನ್ನು ಅಗಲಿದ್ದಾರೆ.

Related posts

ಬಸ್ಸಿನಲ್ಲಿ ಮಹಿಳೆಯ ಜಡೆ ಸವರಿದಾತನ ವಿರುದ್ಧ ಪ್ರಕರಣ ದಾಖಲು

ಕೊರಗಜ್ಜನ ಕವಿತೆಗಳಲ್ಲಿ ಆಕ್ಷೇಪಾರ್ಹ ಪದ ಬಳಕೆ, ಜಾಲತಾಣಗಳಲ್ಲಿ ಕುಹಕವಾಡುತ್ತಿರುವವರು ಯಾರು..?

ಮದುವೆಯಾಗಿ ಐದೇ ದಿನಕ್ಕೆ ಶವವಾಗಿ ವಧು ಪತ್ತೆ