ಪುತ್ತೂರು

ಉಪ್ಪಿನಂಗಡಿ: ಹಿಂದೂ ಯುವಕನ ಮೀನಿನ ಅಂಗಡಿಗೆ ತಡರಾತ್ರಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು

1.2k

ಉಪ್ಪಿನಂಗಡಿ : ಇಲ್ಲಿನ ಹಳೆಗೇಟು ಬಳಿ ಇರುವ ಮೀನಿನ ಅಂಗಡಿಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಹಳೆಗೇಟು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಅಶೋಕ್ ಎಂಬವರಿಗೆ ಸೇರಿದ ಮೀನಿನ ಅಂಗಡಿಯಿದ್ದು, ಅದಕ್ಕೆ ಆದಿತ್ಯವಾರ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆಯಿಂದ ಮೀನಿನ ಅಂಗಡಿ ಹಾಗೂ ಮಂಜುಗಡ್ಡೆ ಹಾಕಿ ಶೇಖರಿಸಿಟ್ಟ ಮೀನು ಸುಟ್ಟು ಹೋಗಿವೆ. ಅಶೋಕ್ ಅವರು ಹಿಂದೂ ಪರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಗಲಭೆಗೆ ಕುಮ್ಮಕ್ಕು ನೀಡುವ ಉದ್ದೇಶದಿಂದ ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂಬ ಆರೋಪ ಕೇಳಿಬಂದಿದೆ. ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದು ಕಿಡಿಗೇಡಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಶಾಸಕ ಸಂಜೀವ ಮಠಂದೂರು, ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

See also  ಪುತ್ತೂರು: ಕುಲಾಲ ಸಮಾಜಸೇವಾ ಸಂಘದ ವಾರ್ಷಿಕ ಮಹಾಸಭೆ, ವಿದ್ಯಾರ್ಥಿವೇತನ ವಿತರಣೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget