ಕ್ರೈಂವೈರಲ್ ನ್ಯೂಸ್

ದುಬಾರಿ ಮೀನು ಕಳ್ಳರ ಕೈ ಸೇರಿದ್ದೇಗೆ..? ಬರೋಬ್ಬರಿ 4.5 ಕೋಟಿ ರೂ. ಮೌಲ್ಯದ ಆ ಮೀನು ಯಾವುದು..? ಇಲ್ಲಿದೆ ರೋಚಕ ಸ್ಟೋರಿ

268

ನ್ಯೂಸ್ ನಾಟೌಟ್: ವಿದೇಶಕ್ಕೆ ಕಳ್ಳ ಸಾಗಣೆ ಮಾಡಲು ಯತ್ನಿಸುತ್ತಿದ್ದ ಸುಮಾರು 500 ಅಪರೂಪದ ಮೀನುಗಳನ್ನು ರಕ್ಷಣೆ ಮಾಡಿದ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಿನ ದುಬ್ರುಘರ್ ವಿಮಾನ ನಿಲ್ದಾಣದಿಂದ ಕಳ್ಳರನ್ನು ಹೆಡೆಮುರಿಕಟ್ಟಿದ್ದಾರೆ. ಅರಣ್ಯ ಇಲಾಖೆ ವಶಕ್ಕೆ ಪಡೆದ ಈ ಮೀನುಗಳ ಮೌಲ್ಯ ಬರೋಬ್ಬರಿ 4.5 ಕೋಟಿ ರೂ ಎಂದು ತಿಳಿದುಬಂದಿದೆ.

ಅಸ್ಸಾಂನ ಅರಣ್ಯ ಇಲಾಖೆ ವಶಕ್ಕೆ ಪಡೆದಿರುವ ಮೀನುಗಳ ಹೆಸರು ಚನ್ನಾ ಬರ್ಕಾ. ಇದು ಅಪರೂಪದಲ್ಲಿ ಅಪರೂಪವಾದ ಮೀನು. ಅಸ್ಸಾಂನ ತಿನ್‌ಸುಕಿಯಾ ಜಿಲ್ಲೆವರಾದ ಶ್ರೀಧನ್ ಸರ್ಕಾರ್ ಹಾಗೂ ಜಿತಿನ್ ಸರ್ಕಾರ್ ಎಂಬ ಆರೋಪಿಗಳು ಈ ಮೀನುಗಳನ್ನು ವಿದೇಶಕ್ಕೆ ಕಳ್ಳ ಸಾಗಣೆ ಮಾಡುವ ವೇಳೆ ಮಾಲು ಸಮೇತ ಸಿಕ್ಕಿ ಬಿದ್ದಿದ್ದಾರೆ.

ಆರೋಪಿಗಳು ದಿಬ್ರುಘರ್‌ನಿಂದ ಕೋಲ್ಕತ್ತಾಗೆ ವಿಮಾನದ ಮೂಲಕ ಹೋಗಿ ನಂತರ ವಿದೇಶಕ್ಕೆ ತಲುಪುವ ತಯಾರಿ ನಡೆಸಿದ್ದರು ಎನ್ನಲಾಗಿದೆ. ಈ ವೇಳೆ ದಿಬ್ರುಘರ್‌ನಲ್ಲಿ ಇಂಡಿಗೋ ವಿಮಾನವನ್ನು ಆರೋಪಿಗಳು ಏರುವ ಮುನ್ನವೇ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.

ಆರೋಪಿಗಳನ್ನು ಬಂಧಿಸಿದ ಬಳಿಕ ವಿಚಾರಣೆ ನಡೆಸಿದ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಹಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ. ಆರೋಪಿಗಳು ಅಸ್ಸಾಂ ತಿನ್‌ಸುಕಿಯಾ ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ಹಲವು ಗ್ರಾಮಸ್ಥರಿಂದ ಮೀನು ಖರೀದಿ ಮಾಡಿದ್ದರಂತೆ. ಅದೂ ಕೂಡಾ ಪ್ರತಿ ಕೆಜಿಗೆ ಕೇವಲ 400 ರೂಪಾಯಿ ಹಣ ನೀಡಿ ಈ ಮೀನನ್ನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

ಆರೋಪಿಗಳು ಈ ಮೀನನ್ನು ಇಂಡೋನೇಷ್ಯಾ, ಮಲೇಷ್ಯಾ, ಚೀನಾ ಹಾಗೂ ಜಪಾನ್ ದೇಶಗಳಲ್ಲಿ ಮಾರಾಟ ಮಾಡಲು ಮುಂದಾಗಿದ್ದರು ಎಂಬ ಸಂಗತಿಯೂ ತನಿಖೆ ವೇಳೆ ಬಯಲಾಗಿದೆ.

See also  ಕೇರಳದ ಭೂಕುಸಿತ ಉಲ್ಲೇಖಿಸಿ ಭಯಾನಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ..! ಅಮಾವಾಸ್ಯೆಯ ಬಳಿಕ ಎಲ್ಲವೂ ಬದಲಾಗುತ್ತಾ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget