ಕೊಡಗು

ಊರುಬೈಲಿನಲ್ಲಿ ಬೆಂಕಿ ಅವಘಡ, ರಬ್ಬರ್ ತೋಟಕ್ಕೆ ಬೆಂಕಿ, ಅಪಾರ ನಷ್ಟ

ಊರುಬೈಲು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ರಬ್ಬರ್ ತೋಟಕ್ಕೆ ಬೆಂಕಿ ತಗುಲಿದ ಪರಿಣಾಮವಾಗಿ ಅಪಾರ ನಷ್ಟ ಸಂಭವಿಸಿದ ಘಟನೆ ಚೆಂಬು ಗ್ರಾಮದ ಊರುಬೈಲಿನಲ್ಲಿ ಮಾ.2ರಂದು ಮಧ್ಯಾಹ್ನ ಸಂಭವಿಸಿದೆ.

ಊರುಬೈಲಿನ ಲೀಲಾವತಿ ಜಯಪ್ರಕಾಶ್ ರಬ್ಬರ್ ತೋಟದ ಬಳಿಯಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿದ ಕಾರಣ ತರಗಲೆ, ಒಣಹುಲ್ಲುಗಳಿಗೆ ಬೆಂಕಿ ತಗುಲಿ ಹೊತ್ತಿ ಉರಿಯತೊಡಗಿತು. ವಿಷಯ ತಿಳಿದು ಸುಳ್ಯ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಅನೇಕ ರಬ್ಬರ್ ಗಿಡಗಳಿಗೆ ಹಾನಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿರುವುದಾಗಿ ತಿಳಿದುಬಂದಿದೆ.

Related posts

ಮಡಿಕೇರಿ: ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಲು ಹೊರಟಿದ್ದ 24 ವರ್ಷದ ಯುವತಿಗೆ ಹೃದಯಾಘಾತ, ಮನೆಯಿಂದ ಕೆಲಸಕ್ಕೆಂದು ಹೊರಡುತ್ತಿದ್ದವಳು ತಾಯಿ ಎದುರಲ್ಲೇ ಪ್ರಾಣ ಬಿಟ್ಟಳು..!

ಬಾಲಕನ ಮರ್ಮಾಂಗ ಹಿಡಿದೆಳೆದ ಪ್ರಕರಣ: ಆಸ್ಪತ್ರೆಗೆ ತೆರಳಿ ಬಾಲಕನಿಗೆ ಆರ್ಥಿಕ ಸಹಾಯವನ್ನಿತ್ತ ಕೊಡಗು ಸಂಪಾಜೆಯ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ

ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸಿನ ಮಳೆ ಆರ್ಭಟ ಸಾಧ್ಯತೆ, ನಾಳೆ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್