ಕರಾವಳಿಕೊಡಗು

ಮಡಿಕೇರಿ: ಫರ್ನಿಚರ್ ಗೋದಾಮಿನಲ್ಲಿ ಅಗ್ನಿ ಅವಘಡ ! ಸತತ 7 ಗಂಟೆಗಳ ಕಾರ್ಯಾಚರಣೆ ನಂತರವೂ ಆರದ ಬೆಂಕಿ..!

68
Spread the love

ನ್ಯೂಸ್ ನಾಟೌಟ್: ಪ್ರಶಾಂತ್ ಫರ್ನಚರ್ ಎಂಬ ಗೋಡಾನ್‌ಗೆ ಬೆಂಕಿ ತಗುಲಿ ಅಪಾರ ಹಾನಿಯಾದ ಘಟನೆ ಮಡಿಕೇರಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಫೆ.20 ರಂದು ನಡೆದಿದೆ.

ಪ್ರಶಾಂತ್ ಫರ್ನಚರ್ ಗೋಡಾನ್‌ ನಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿ ನಂದಿಸಲು ಅಗ್ನಿಶಾಮಕದಳ ಹರ ಸಾಹಸ ಪಡುತ್ತಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರುವುದಾಗಿ ವರದಿಯಾಗಿದ್ದು, ಸತತ 7 ಗಂಟೆಗಳ ಕಾರ್ಯಾಚರಣೆ ನಂತರವೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಬಂದಿರುವ ಪೊಲೀಸರು ಕೈಗಾರಿಕಾ ಬಡಾವಣೆಯ ಕೊಹಿನೂರ್ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯ ವಾಹನ ಸಂಚಾರ ಬಂದ್ ಮಾಡಿದ್ದಾರೆ. ನೀರು ತುಂಬಿಕೊಂಡ ಅಗ್ನಿಶಾಮಕ ವಾಹನಗಳು ಸಾಲುಗಟ್ಟಿ ಬರುತ್ತಿವೆಯಾದರು ಮರದ ಪೀಠೋಪಕರಣಗಳಿಗೆ ಹೊತ್ತಿರುವ ಬೆಂಕಿಯನ್ನು ನಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಅಗ್ನಿಶಾಮಕದಳದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಅಗ್ನಿಯ ಜ್ವಾಲೆಗೆ ಲಕ್ಷಾಂತರ ಮೌಲ್ಯದ ವಸ್ತುಗಳು ಆಹುತಿಯಾಗಿರುವುದಾಗಿ ಮೂಲಗಳು ತಿಳಿಸಿವೆ.

See also  ಪಣಂಬೂರು ಬೀಚ್ ನಲ್ಲಿ ತಿರುಗಾಡುತ್ತಿದ್ದ ಅನ್ಯಕೋಮಿನ ಜೋಡಿಗೆ ಕಿರುಕುಳ, ಶ್ರೀರಾಮ ಸೇನೆಯ ಮೂವರ ಬಂಧನ
  Ad Widget   Ad Widget   Ad Widget