ಕೊಡಗುಸುಳ್ಯ

ಕಿಲಾರಿನಲ್ಲಿ ಅಗ್ನಿ ಅವಘಡ; ಟ್ರಾನ್ಸ್‌ಫಾರ್ಮರ್‌ನಿಂದ ಬಿದ್ದ ಬೆಂಕಿ ಕಿಡಿ

ನ್ಯೂಸ್‌ ನಾಟೌಟ್‌: ಸುಳ್ಯ ತಾಲೂಕಿನ ಸಂಪಾಜೆ ಸಮೀಪದ ಕಿಲಾರಿನಲ್ಲಿ ಮಂಗಳವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಟ್ರಾನ್ಸ್‌ಫಾರ್ಮರ್‌ನಿಂದ ಬಿದ್ದ ಬೆಂಕಿಯ ಕಿಡಿ ಒಣಗಿದ್ದ ಹುಲ್ಲುಕಡ್ಡಿಗಳಿಗೆ ತಾಗಿ ಅಪಾರ ಪ್ರಮಾಣದ ಕಾಡು ಗಿಡಗಳು ಬೆಂಕಿಗಾಹುತಿಯಾಗಿವೆ.

ತಕ್ಷಣ ಸ್ಥಳೀಯರು ಸೇರಿ ಬೆಂಕಿ ನಂದಿಸಿದರು. ಅಲ್ಲದೇ ರಸ್ತೆ ಬದಿ ಬಿದ್ದಿರುವ ತರೆಗೆಲೆಗಳು ಬಿಸಿಲಿನ ಶಾಖಕ್ಕೆ ಒಣಗಿ ಹೋಗಿದ್ದು, ಬೆಂಕಿಯ ಕಿಡಿ ಸ್ವಲ್ಪ ತಾಗಿದರೂ ಭಾರಿ ಬೇಗನೆ ಹೊತ್ತಿಕೊಳ್ಳುತ್ತಿದ್ದು, ಇದರಿಂದ ಬೆಂಕಿ ಜ್ವಾಲೆ ಹೆಚ್ಚಿನ ಭಾಗವನ್ನು ಆವರಿಸುವಂತಾಗಿದೆ.

ಬೆಂಕಿ ಬಿದ್ದ ತಕ್ಷಣ ಅಲ್ಲೇ ಇದ್ದ ಸ್ಥಳೀಯ ಆರು ಮನೆಯವರು ಸೇರಿ ಬೆಂಕಿ ಅರಣ್ಯ ಪ್ರದೇಶ ಮತ್ತು ರಬ್ಬರ್‌ ಎಸ್ಟೇಟ್‌ಗಳಿಗೆ ಹಬ್ಬದಂತೆ ಕ್ರಮ ಕೈಗೊಳ್ಳಲಾಯಿತು ಎಂದು ಸ್ಥಳೀಯ ನಿವಾಸಿ ರಾಜಾ ಯಡ್ಪನೆ ನ್ಯೂಸ್‌ ನಾಟೌಟ್‌ಗೆ ತಿಳಿಸಿದ್ದಾರೆ.

Related posts

ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನಾಚರಣೆ ಅಂಗವಾಗಿ 10ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ, ಅದ್ಧೂರಿ ಕಾರ್ಯಕ್ರಮಕ್ಕೆ ದಿನಗಣನೆ ಆರಂಭ

ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕ ಸಂಘ(ರಿ) ಕುಕ್ಕುಜಡ್ಕ (ಬಿಎಂಎಸ್) ವಾರ್ಷಿಕ ಮಹಾಸಭೆ

ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಕೆ.ವಿ.ಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಎನ್ನೆಂಸಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ, ಕ್ಯಾಂಪಸ್ ನಲ್ಲಿ ಹಾರಾಡಿದ ತಿರಂಗ