Uncategorized

ಅಪರಿಚಿತರು ನಿಮಗೆ ಕಾಲ್ ಮಾಡಿದ್ರೆ ಬೇಗ ಗೊತ್ತಾಗಬೇಕು ಹೇಗೆ?

ನ್ಯೂಸ್ ನಾಟೌಟ್ : ನಿಮ್ಮ ಮೊಬೈಲ್‌ ಗೆ ಅಪರಿಚಿತರ ಮೊಬೈಲ್ ಸಂಖ್ಯೆಯಿಂದ ಕರೆಗಳು ಬರುತ್ತೀದೆಯಾ? ಹಾಗಾದರೆ ಅವರ ಹೆಸರು ಇನ್ನು ನಿಮ್ಮ ಮೊಬೈಲ್ ನಲ್ಲಿ ನೋಡಬಹುದು. ಹೌದು, ಅಪರಿಚಿತ ನಂಬರ್ ಅಥವಾ ಅನಪೇಕ್ಷಿತ ಕರೆಗಳ ಸಮಸ್ಯೆಯನ್ನು ನಿವಾರಿಸಲು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊಸ ಮಾರ್ಗ ಕಂಡು ಹಿಡಿದಿದೆ.

ನೀವು ಸೇವ್ ಮಾಡದ ನಂಬರಿನಿಂದ ಯಾರಾದರು ಕರೆ ಮಾಡಿದರೂ ಅವರ ಹೆಸರು ನಿಮ್ಮ ಮೊಬೈಲ್ ನಲ್ಲಿ ನೋಡಬಹುದಾದ ಹೊಸ ಉಪಕ್ರಮವನ್ನು ಟ್ರಾಯ್ ಶ್ರೀಘ್ರವೇ ಜಾರಿಗೆ ತರಲು ಸಜ್ಜಾಗಿದೆ. ಟೆಲಿಕಾಂ ಆಪರೇಟರ್ ಸಹಾಯದಿಂದ ಕೆವೈಸಿ ದಾಖಲೆಯನ್ನು ಆಧರಿಸಿ ಕರೆ ಮಾಡಿದವರ ಹೆಸರನ್ನು ಪತ್ತೆ ಹಚ್ಚುವಂತೆ ಮಾಡಲಾಗುತ್ತದೆ. ಈ ಉಪಕ್ರಮ ಜಾರಿಗೆ ಬಂದಾಗ ಅಪರಿಚಿತರ ನಂಬರಿನ ಬದಲು ಅವರ ಹೆಸರು ನಿಮ್ಮ ಮೊಬೈಲ್ ನಲ್ಲಿ ಬರುವಂತೆ ಮಾಡುತ್ತದೆ. ಪ್ರಸ್ತುತ ಇಂತಹ ಸೌಲಭ್ಯವನ್ನು ಪಡೆಯಲು ಜನರು ‘ಟ್ರೂಕಾಲರ್’ ನಂತಹ ಆ್ಯಪ್ ಅನ್ನು ಬಳಸುತ್ತಾರೆ. ಆದರೆ ಇನ್ನು ಮುಂದಿನ ದಿನಗಳಲ್ಲಿ ಅಂತಹ ಆ್ಯಪ್ ನ ಅಗತ್ಯವಿಲ್ಲ.

Related posts

ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ‘ಜಾಗೃತಿ ಅರಿವು’ ಕಾರ್ಯಕ್ರಮ, ಮಾದಕ ವ್ಯಸನ,ಸೈಬರ್ ಅಪರಾಧ ಮತ್ತು ರಸ್ತೆ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದ ಸುಳ್ಯ ಪೊಲೀಸ್ ಸಬ್ ಇನ್ಸ್‌ ಪೆಕ್ಟರ್

ಮನೆಯಲ್ಲಿ ಮಲಗಿದ್ದ ವ್ಯಕ್ತಿಗೆ ಟೋಲ್ ಶಾಕ್..!

ರಾಷ್ಟ್ರಪತಿ ಭವನದಲ್ಲಿ ಮದುವೆಗೆ ಅಣಿಯಾದ ಪೂನಂ-ಅವನೀಶ್! ಇತಿಹಾಸದಲ್ಲೇ ಮೊದಲ ಬಾರಿಗೆ  ಫೆ. 12ರಂದು ವಿಶಿಷ್ಟ ಸಮಾರಂಭ!ರಾಷ್ಟ್ರಪತಿ ಭವನದಲ್ಲೇಕೆ ವಿವಾಹ ?