ಕ್ರೈಂದೇಶ-ಪ್ರಪಂಚದೇಶ-ವಿದೇಶ

ಫೈನಾನ್ಸ್ ಕಂಪನಿ ಕಿರುಕುಳದಿಂದ ನದಿಗೆ ಹಾರಿದ್ದ ಶಿಕ್ಷಕಿಯ ಮೃತದೇಹ ಪತ್ತೆ..! ಮರುಪಾವತಿಗೆ ಕೇಳಲು ಮನೆಗೆ ತೆರಳಿದ್ದಾಗ ಸಾಲ ಪಡೆದವರೇ ಹಲ್ಲೆ ನಡೆಸಿದ್ದರು ಎಂದು ದೂರು ನೀಡಿದ್ದ ಫೈನಾನ್ಸ್ ಕಂಪನಿ..!

ನ್ಯೂಸ್ ನಾಟೌಟ್: ಮೈಕ್ರೋ ಫೈನಾನ್ಸ್ ಕಂಪನಿಯ ಕಿರುಕುಳ ತಾಳಲಾರದೆ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ ಶಿಕ್ಷಕಿ ಪುಷ್ಪಲತಾ ಎಂ.ಟಿ. (46) ಮೃತದೇಹ ಮಂಗಳವಾರ(ಜ.28) ಬೆಳಿಗ್ಗೆ ಪತ್ತೆಯಾಗಿದೆ.

ಹೊನ್ನಾಳಿಯ ದುರ್ಗಿಗುಡಿ ಪ್ರದೇಶದ ನಿವಾಸಿಯಾಗಿರುವ ಸರ್ಕಾರಿ ಶಾಲೆಯ ಶಿಕ್ಷಕಿ ಪುಷ್ಪಲತಾ ಭಾನುವಾರ ಮಧ್ಯಾಹ್ನದಿಂದ ಕಾಣೆಯಾಗಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ, ಮುಳುಗು ತಜ್ಞರು ಸೋಮವಾರ ಬೆಳಿಗ್ಗೆಯಿಂದಲೂ ಶೋಧ ಕಾರ್ಯ ನಡೆಸಿದ್ದರು.

ಫೈನಾನ್ಸ್‌ ಕಂಪನಿ ಸಾಲಗಾರರ ಕಿರುಕುಳದಿಂದ ಬೇಸತ್ತು ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ತುಮ್ಮಿನಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಪುಷ್ಪಲತಾ ಕಾರ್ಯ ನಿರ್ವಹಿಸುತ್ತಿದ್ದರು.
ಇಲ್ಲಿನ ರಾಘವೇಂದ್ರ ಮಠದ ಬಳಿ ಸ್ವಲ್ಪ ಹೊತ್ತು ಕುಳಿತು, ಬಳಿಕ ನದಿಗೆ ಇಳಿದಿರುವುದು ಸಿ.ಸಿ. ಟಿ.ವಿ ಕ್ಯಾಮೆರಾದಲ್ಲಿ ಪತ್ತೆಯಾಗಿತ್ತು.

‘ಮನೆ ಕಟ್ಟಿಸಲು ಫೈನಾನ್ಸ್‌ ಕಂಪನಿಯಿಂದ ₹40 ಲಕ್ಷ ಹಾಗೂ ₹ 20 ಲಕ್ಷ ಕೈಸಾಲ ಮಾಡಿದ್ದೆವು. ಫೈನಾನ್ಸ್‌ ಕಂಪನಿಯವರು ಸಾಲ ಮರುಪಾವತಿಗೆ ಒತ್ತಾಯಿಸಿ ಮನೆ ಹಾಗೂ ಶಾಲೆಗೆ ಬಂದು ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾಳೆ’ ಎಂದು ಪುಷ್ಪಲತಾ ಅವರ ಪತಿ ಹಾಲೇಶ್ ಮಾಹಿತಿ ನೀಡಿದ್ದಾರೆ.
ಸಾಲ ಮರುಪಾವತಿಗೆ ಮನೆಗೆ ತೆರಳಿದ್ದಾಗ ಸಾಲ ಪಡೆದವರೇ ಹಲ್ಲೆ ನಡೆಸಿದ್ದರು ಎಂದು ಪುಷ್ಪಲತಾ ದಂಪತಿ ವಿರುದ್ಧ ಹೊನ್ನಾಳಿ ಪೊಲೀಸ್ ಠಾಣೆಗೆ ಫೈನಾನ್ಸ್‌ ಕಂಪನಿಯವರು 20 ದಿನದ ಹಿಂದೆ ದೂರು ನೀಡಿದ್ದರು. ಎರಡೂ ಕಡೆಯವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ ಬಳಿಕ ಫೈನಾನ್ಸ್‌ ಕಂಪನಿಯವರು ದೂರು ವಾಪಸ್ ಪಡೆದಿದ್ದರು ಎನ್ನಲಾಗಿದೆ.

Click

Related posts

ಸಂಪಾಜೆ: ತಡರಾತ್ರಿ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು..! ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಕಡಬ: ಕಾಡಿನೊಳಗಿಂದ ನೀರಿನಲ್ಲಿ ಹರಿದು ಬಂತು ಮಾನವನ ತಲೆಬುರುಡೆ

ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ದಿನ ಜೈಲು, ಜಾಮೀನು ಅರ್ಜಿ ಮುಂದೂಡಿಕೆ..! ಇನ್ನೂ ವಿಚಾರಣೆ ಮುಗಿದಿಲ್ಲವೇಕೆ..?