ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ದರ್ಶನ್ ಮತ್ತು ಗ್ಯಾಂಗ್ ನಿಂದ ಹತ್ಯೆಯಾದ ರೇಣುಕಾಸ್ವಾಮಿ ಮನೆಗೆ ಇಂದು(ಜೂ.15) ಚಲನಚಿತ್ರ ವಾಣಿಜ್ಯ ಮಂಡಳಿ ಭೇಟಿ..! ದರ್ಶನ್ ನನ್ನು ಬ್ಯಾನ್ ಮಾಡುವ ಬಗ್ಗೆ ಇಂದು ನಿರ್ಧಾರ ಪ್ರಕಟವಾಗಲಿದೆಯಾ..?

ನ್ಯೂಸ್ ನಾಟೌಟ್: ಇಡೀ ದೇಶದಲ್ಲೇ ಸಂಚಲನ ಮೂಡಿಸಿದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಳಿಕ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮೇಲೆ ನಟ ದರ್ಶನ್ ನನ್ನು ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ತೀವ್ರ ಒತ್ತಡ ಹೆಚ್ಚಾಗಿದ್ದು, ಈ ಬೆನ್ನಲ್ಲೇ ನಟ ದರ್ಶನ್‌ (Darshan) ಕೃತ್ಯವನ್ನು ಖಂಡಿಸಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು(ಜೂನ್.15) ಹತ್ಯೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ಭೇಟಿ ನೀಡಿ ಸ್ವಾಂತನ ಹೇಳಲಿದೆ ಎಂದು ವರದಿ ತಿಳಿಸಿದೆ.

ಸಾರಾ ಗೋವಿಂದು, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ವಾಣಿಜ್ಯ ಮಂಡಳಿ ಅಧ್ಯಕ್ಷ ಸುರೇಶ್ ಸೇರಿದಂತೆ 15ಕ್ಕೂ ಹೆಚ್ಚು ಸದಸ್ಯರು ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಹತ್ಯೆಯಾದ ರೇಣುಕಾ ಸ್ವಾಮಿ ಮನೆಯವರ ಸಂಪೂರ್ಣ ಮಾಹಿತಿ ಮತ್ತು ಅಭಿಪ್ರಾಯ ಸಂಗ್ರಹ ನಡೆಯಲಿದೆ ಎಂದು ವರದಿ ತಿಳಿಸಿದೆ. ಈ ಪ್ರಕರಣವನ್ನು ನಾವು ಖಂಡಿಸುತ್ತೇವೆ. ಅವರನ್ನು ತಕ್ಷಣಕ್ಕೆ ಬ್ಯಾನ್ ಮಾಡಲು ಆಗುವುದಿಲ್ಲ. ಬ್ಯಾನ್ ಮಾಡಲು, ಕಲಾವಿದರ ಸಂಘ ಹಾಗೂ ಇತರ ಅಂಗ ಸಂಸ್ಥೆಗಳು ಭಾಗಿಯಾಗಬೇಕು ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ್ಯ ಎನ್.ಎಂ ಸುರೇಶ್ ಜೂ.13ರಂದು ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

Related posts

ಶರಣಾಗತಿಯಾದ ನಕ್ಸಲ್ ಲತಾ ಟೀಂನಲ್ಲಿದ್ದ ರವೀಂದ್ರ ಮಿಸ್ಸಿಂಗ್..? ವಿಕ್ರಂಗೌಡ ಎನ್‍ ಕೌಂಟರ್ ಬಳಿಕ ಟೀಂ ತೊರೆದಿದ್ದ ರವೀಂದ್ರ ನಾಪತ್ತೆ..!

ಚುನಾವಣಾ ದಿನಾಂಕ ಬದಲಾಯಿಸುವಂತೆ ಆಯೋಗಕ್ಕೆ ಮನವಿ ಮಾಡಿದ್ದೇಕೆ ಮುಸ್ಲಿಂ ಸಂಘಟನೆಗಳು..? ಇಲ್ಲಿದೆ ಸಂಪೂರ್ಣ ಮಾಹಿತಿ

ಮಂಗಳೂರು: ಶಾರದೋತ್ಸವ ಮೆರವಣಿಗೆಯ ವೇಳೆ ಚೂರಿ ಇರಿತ..! ಎರಡು ಹುಲಿವೇ‍ಷ ತಂಡಗಳ ನಡುವೆ ಹೊಡೆದಾಟ ನಡೆದದ್ದೇಕೆ..? ಏನಿದು ಪ್ರಕರಣ?