ಕರಾವಳಿಕ್ರೈಂಪುತ್ತೂರುವೈರಲ್ ನ್ಯೂಸ್ಸುಳ್ಯ

ಗಣೇಶ್‌ಪುರ-ಕೈಕಂಬದಲ್ಲಿ ಇತ್ತಂಡಗಳ ನಡುವೆ ಹೊಡೆದಾಟ

ನ್ಯೂಸ್‌ನಾಟೌಟ್‌: ಮಂಗಳೂರಿನ ಸುರತ್ಕಲ್‌ ಠಾಣಾ ವ್ಯಾಪ್ತಿಯ ಗಣೇಶ್‌ಪುರ-ಕೈಕಂಬದಲ್ಲಿ ಬುಧವಾರ ರಾತ್ರಿ ಕಾರಿಗೆ ಬೈಕ್‌ ತಾಗಿದ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸುರತ್ಕಲ್‌ ಪೊಲೀಸರು ಜನರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಘಟನೆಗೆ ಕಾರಣವಾದ ಕಾರು ಇತ್ತೀಚಿಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಫಾಝಿಲ್ ಅವರ ಸಹೋದರ ಆದಿಲ್ ನದ್ದಾಗಿದ್ದು, ಇದು ಬೈಕಿನಲ್ಲಿ ಹೋಗುತ್ತಿದ್ದ ನಾಗೇಶ್ ಎಂಬುವವರ ಬೈಕಿಗೆ ತಾಗಿ ನಾಗೇಶ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಾಯಗೊಂಡಿದ್ದರು. ಈ ವೇಳೆ ಎರಡು ಸಮುದಾಯದ ಜನ ಗುಂಪು ಸೇರಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಬೈಕ್ ಸವಾರ ನಾಗೇಶ್ ಹಾಗೂ ಆದಿಲ್‌ನ ಚಿಕ್ಕಪ್ಪ ಉಮರ್ ಫಾರೂಕ್ ಒಳರೋಗಿಯಾಗಿ ದಾಖಲಾಗಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದ್ದು, ಇಬ್ಬರು ಸುರತ್ಕಲ್ ಠಾಣೆಯಲ್ಲಿ ದೂರು – ಪ್ರತಿ ದೂರು ನೀಡಿದ್ದಾರೆ. ಈಗಾಗಲೇ ಕರಾವಳಿಯ ಸೂಕ್ಷ್ಮ ಪ್ರದೇಶಗಳಲ್ಲಿ ಸುರತ್ಕಲ್‌ ಕೂಡ ಒಂದಾಗಿದ್ದು ಇತ್ತೀಚೆಗೆ ಕೆಲವು ಅಹಿತಕರ ಘಟನೆಗಳಿಗೆ ಸಾಕ್ಷಿಯಾಗಿದೆ.

Related posts

ಜೀಪ್ -ಓಮ್ನಿ ಕಾರು ಮುಖಾಮುಖಿ ಡಿಕ್ಕಿ, ಸ್ಥಳದಲ್ಲೇ ಓರ್ವ ವ್ಯಕ್ತಿ ಸಾವು

ಸುಳ್ಯ: “2 ದಿನದ ಒಳಗೆ ಗಬ್ಬುನಾರುವ ತ್ಯಾಜ್ಯ ತೆರವುಗೊಳಿಸಿ ಇಲ್ಲವೇ ನಗರ ಪಂಚಾಯತ್ ಮುಂದೆ ನಾವೇ ತ್ಯಾಜ್ಯ ಸುರಿಯುತ್ತೇವೆ” ಪರಿಸರ ಹೋರಾಟ ಸಮಿತಿ ಕಲ್ಚರ್ಪೆ ಎಚ್ಚರಿಕೆ, ಪಯಸ್ವಿನಿ ನದಿಯನ್ನು ಸೇರುತ್ತಿದೆಯೇ ತ್ಯಾಜ್ಯ ಮಿಶ್ರಿತ ನೀರು..?

JDS ನಾಯಕನ ಗೆಲುವಿಗಾಗಿ ಧರ್ಮಸ್ಥಳಕ್ಕೆ ಹರಕೆ ಹೊತ್ತಿದ್ದ ಬೀದಿ ಬದಿ ವ್ಯಾಪಾರಸ್ಥರು..! ಹರಕೆ ತೀರಿಸುವುದಕ್ಕೆ ಓಡೋಡಿ ಧರ್ಮಸ್ಥಳಕ್ಕೆ ಬಂದ ಹಿಂದಿದೆ ಆ ಒಂದು ಕಾರಣ..? ವಿಡಿಯೋ ವೀಕ್ಷಿಸಿ