ಕರಾವಳಿಚಿಕ್ಕಮಗಳೂರು

ಚಿಕ್ಕಮಗಳೂರು: ವರುಣದೇವನ ಆಗಮನಕ್ಕಾಗಿ ವಿಶಿಷ್ಟ ಆಚರಣೆ ..!,37 ವರ್ಷದ ಹಿಂದಿನ ಆಚರಣೆಗೆ ಮುಂದಾದ ಜನ..!ಏನಿದು ಆಚರಣೆ?

ನ್ಯೂಸ್ ನಾಟೌಟ್ : ರಾಜ್ಯದಲ್ಲಿ ಮಳೆಯ ಸದ್ದೇ ಇಲ್ಲ. ಕಳೆದ ಅನೇಕ ವರ್ಷಗಳ ಮಳೆಯನ್ನು ಹೋಲಿಸಿ ನೋಡಿದ್ರೆ ಈ ಬಾರಿ ಮಳೆ ಪ್ರಮಾಣ ತೀರಾ ಕಡಿಮೆ. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ರಾಜ್ಯದ ಮೂಲೆ ಮೂಲೆಯಲ್ಲಿ ಮಳೆ ಆರ್ಭಟ ಜೋರಾಗಿ ಇರಬೇಕಿತ್ತು.ಧಾರಾಕಾರ ಮಳೆ ಸುರಿಯಬೇಕಾಗಿತ್ತು. ಆದರೆ ಮಳೆಗಾಲ ಸಮಯದಲ್ಲಿಯೂ ಮಳೆಗಾಗಿ ಕಾಯುವ ಸಂದರ್ಭ ಬಂದೊದಗಿದೆ. ಹೀಗಾಗಿ ಮುಖ್ಯವಾಗಿ ರೈತರಿಗೆ ಟೆನ್ಷನ್ ಮೇಲೆ ಟೆನ್ಷನ್ ಶುರುವಾಗ್ಬಿಟ್ಟಿದೆ.

ಮಳೆಗಾಗಿ ಕಪ್ಪೆ ಮದುವೆ ಮಾಡೋದನ್ನು ನೋಡಿದ್ದೇವೆ.ಆದರೆ ಚಿಕ್ಕಮಗಳೂರಿನಲ್ಲಿ ಮಳೆಗಾಗಿ 37 ವರ್ಷದ ಹಿಂದಿನ ಆಚರಣೆಗೆ ಮುಂದಾಗಿದ್ದಾರೆ. ಹೌದು, ಮಲೆನಾಡಿಗರು ಮಳೆರಾಯನನ್ನು ವಿಶಿಷ್ಟ ರೀತಿಯಲ್ಲಿ ಪ್ರಾರ್ಥನೆ ಮಾಡುತ್ತಾ ದೇವರ ಮೊರೆ ಹೋಗಿದ್ದಾರೆ. ಎನ್.ಆರ್.ಪುರ ತಾಲೂಕಿನ ಗಂಗೇಗಿರಿ ಬೆಟ್ಟ ಹತ್ತಿದ ಅಳೇಹಳ್ಳಿ, ಹೆನ್ನಂಗಿ, ಬೆಳ್ಳಂಗಿ ಮೂರು ಗ್ರಾಮಗಳ ಜನರು ವಿಶೇಷ ಪೂಜೆಯನ್ನೇ ಮಾಡಿದ್ದಾರೆ..!

37 ವರ್ಷದ ಹಿಂದೆಯೂ ಇದೇ ರೀತಿ ಮಳೆ ಅಭಾವ ಎದುರಾದಾಗ ಊರಿನ ಗ್ರಾಮಸ್ಥರೆಲ್ಲ ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.ಹೀಗಾಗಿ ಮಳೆ ಬಂದಿತ್ತು ಎಂಬ ನಂಬಿಕೆ ಭಕ್ತರದ್ದು.ಈ ಬಾರಿಯೂ ಜಲಕ್ಷಾಮ ಉಂಟಾಗಿದ್ದು, ಮಳೆಯ ಅಭಾವ ತಲೆದೋರಿದೆ.ಮಳೆಗಾಲದಲ್ಲಿಯೇ ರೈತರು ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನಲೆಯಲ್ಲಿ ಪರದೇಶಪ್ಪನ ಮಠದ ಗುರುಗಳ ನೇತೃತ್ವದಲ್ಲಿ ಗಂಗೇಗಿರಿ ಬೆಟ್ಟ ಹತ್ತಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದ್ದಾರೆ. 37 ವರ್ಷದ ಹಿಂದೆಯೂ ಇದೇ ರೀತಿ ಮಳೆ ಅಭಾವ ಎದುರಾಗಿತ್ತು. ಗಂಗೇಗಿರಿ ಬೆಟ್ಟದಲ್ಲಿ ಪೂಜೆ ಮಾಡಿದರೆ ಮಳೆ ಬರುತ್ತೆ ಅನ್ನೋ ನಂಬಿಕೆ ಭಕ್ತರದ್ದಾಗಿದೆ.

ಗಿರಿಯಲ್ಲಿ ಪೂಜೆ ಮಾಡಿ ಕಳಸದಲ್ಲಿ ಅಲ್ಲಿನ ನೀರು ತಂದು ಪೂಜೆ ಮಾಡಬೇಕು. 9 ದಿನ ಮಡಿಯಿಂದ ಪೂಜೆ ಮಾಡಿದರೆ ಮಳೆಯಾಗುತ್ತೆ ಅನ್ನೋ ಪ್ರತೀತಿ ಇದೆ. ಹೀಗಾಗಿ ಗಂಗೇಗಿರಿಯಿಂದ ಜಲ ತಂದಿರೋ ಜನರಿಂದ 9 ದಿನ ಮಡಿ ಪೂಜೆ ಮಾಡಿದ್ದಾರೆ.ಹೀಗಾಗಿ ಅಲ್ಲಿನ ಜನ ಬಹಳ ಕಾಳಜಿ ವಹಿಸಿ ಈ ಪೂಜೆಯನ್ನು ಮಾಡಲು ಮುಂದಾಗಿದ್ದಾರೆ.ಇನ್ನಾದರೂ ಮಳೆಯಾಗಲಿ ದೇವರೇ ಎಂದು ದೇವರ ಜತೆ ಬೇಡಿಕೊಳ್ಳುತ್ತಿದ್ದಾರೆ.

Related posts

ಬಹುನಿರೀಕ್ಷಿತ ಅರಂತೋಡು-ಎಲಿಮಲೆ ರಸ್ತೆ ಅಭಿವೃದ್ದಿಗೆ ಗುದ್ದಲಿಪೂಜೆ,ಒಂದು ವಾರದೊಳಗೆ 3 ಕೋಟಿ ವೆಚ್ಚದಲ್ಲಿ ಕಾಮಗಾರಿ ಶುರು

ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ ಏನಿದು ಶ್ವಾಸಕೋಶದ ಕ್ಯಾನ್ಸರ್..? ಈ ಬಗ್ಗೆ ವೈದ್ಯರು ಹೇಳೋದೇನು..?

ಇಯರ್ ಬಡ್ಸ್ ಬಳಸುತ್ತಿದ್ದೀರಾ? ಹಾಗಾದ್ರೆ ಸ್ವಲ್ಪ ಎಚ್ಚರಿಕೆ ವಹಿಸಿ..