ಕರಾವಳಿಪುತ್ತೂರು

ಶ್ರೇಷ್ಠ ವೈದ್ಯಕೀಯ ಪ್ರಶಸ್ತಿ ಪುರಸ್ಕೃತ ಡಾ. ಅಜೇಯ್‌ ಅವರಿಗೆ ಪುತ್ತಿಲ ಪರಿವಾರದಿಂದ ಗೌರವ ಸನ್ಮಾನ

264

ನ್ಯೂಸ್‌ ನಾಟೌಟ್‌ ಪುತ್ತೂರು: ಶ್ರೇಷ್ಠ ವೈದ್ಯಕೀಯ ಪ್ರಶಸ್ತಿ ಪುರಸ್ಕೃತರಾಗಿರುವ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಪ್ರಮುಖ ಮೂಳೆ ಶಸ್ತ್ರ ಚಿಕಿತ್ಸಕ ಡಾ.ಅಜೇಯ್ ಅವರನ್ನು ಪುತ್ತಿಲ ಪರಿವಾರದ ವತಿಯಿಂದ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಗೌರವಿಸಲಾಯಿತು.

ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಡಾ. ಅಜೇಯ್ ಅವರನ್ನು ಸನ್ಮಾನಿಸಿ ಮಾತನಾಡಿ, ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಿದ ವೈದ್ಯರನ್ನು ಗೌರವಿಸುವುದು ನಮ್ಮ ಕರ್ತವ್ಯ. ಸಮಾಜ ಕಟ್ಟೆಕಡೆಯ ವ್ಯಕ್ತಿಗೂ ಬದುಕಿಗೂ ಆರೋಗ್ಯ ಸೇವೆ ನೀಡುವಲ್ಲಿ ಶ್ರಮಿಸುತ್ತಿರುವ ಪುತ್ತೂರಿನ ವೈದ್ಯ ಡಾ.ಅಜೇಯ್ ಅವರಿಂದ ಇನ್ನೂ ಹೆಚ್ಚಿನ ಸೇವೆ ಮುಂದುವರಿಯಲಿ ಎಂದು ಆಶಿಸಿದರು.

ಪುತ್ತಿಲ ಪರಿವಾರದ ನಗರ ಅಧ್ಯಕ್ಷ ಅನಿಲ್ ತೆಂಕಿಲ, ಕಾರ್ಯದರ್ಶಿ ಕೃಷ್ಣಪ್ರಸಾದ್ ಶೆಟ್ಟಿ, ಭೀಮ್ ಭಟ್, ಪ್ರವೀಣ್, ಪ್ರಜ್ವಲ್, ಕಿಶೋರ್, ಹರೀಶ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು

See also  ಮೊಮ್ಮಕ್ಕಳೊಂದಿಗೆ ಕ್ರಿಕೆಟ್ ಆಡುತ್ತಿರುವ ಧರ್ಮಾಧಿಕಾರಿ,ಡಾ.ಡಿ. ವೀರೇಂದ್ರ ಹೆಗ್ಗಡೆಯವರ ವಿಡಿಯೋ ವೈರಲ್
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget