ಕರಾವಳಿ

ಫಾಜಿಲ್ ಅಂತ್ಯಸಂಸ್ಕಾರಕ್ಕೆ ಸಿದ್ಧತೆ,  ಸಾವಿರಾರು ಜನರಿಂದ ಅಂತಿಮ ದರ್ಶನ

ನ್ಯೂಸ್ ನಾಟೌಟ್: ಕೊಲೆಯಾದ ಫಾಜಿಲ್ ಅಂತ್ಯ ಸಂಸ್ಕಾರಕ್ಕೆ ಈಗ ಸಿದ್ಧತೆ ನಡೆಯುತ್ತಿದೆ. ಮಂಗಳೂರಿನ ಮಂಗಳಪೇಟೆಯ ಖಬರ್ ಸ್ತಾನ್‌ನಲ್ಲಿ ದಫನ ಕಾರ್ಯ ನಡೆಯಲಿದೆ.  

ಈಗಾಗಲೇ ಮೆರವಣಿಗೆ ಮೂಲಕ ಫಾಝಿಲ್ ಮೃತದೇಹ ತರಲಾಗಿದೆ. ಮಸೀದಿಯ ಸುತ್ತಮುತ್ತ ಸಾವಿರಾರು ಜನರು ನೆರೆದಿದ್ದಾರೆ. ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಸುರತ್ಕಲ್ ಫಾಝಿಲ್ ಕೊಲೆ ಪ್ರಕರಣದ ಹಿನ್ನಲೆಯಲ್ಲಿ ಸುರತ್ಕಲ್ ಹೈವೆಯಿಂದ ಎಂಆರ್ ಪಿಎಲ್ ರೋಡ್ ಗೆ ಬದಲಿ ಸಂಚಾರಿ ವ್ಯವಸ್ಥೆ ಕಲ್ಪಿಸಲಾಗಿದೆ. ಕೃತ್ಯ ನಡೆದ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೃತ್ಯ ನಡೆದ ಬಿ ಜೇಸ್ ಎದುರಿನ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದೆ.

Related posts

ಸೀರೆಯುಟ್ಟು 42 ಕಿ.ಮೀ ಮ್ಯಾರಥಾನ್ ಓಡಿದ ಮಹಿಳೆ!, ದೇಶದ ಸಂಸ್ಕೃತಿ ಸಾರಿದ ಮಹಿಳೆಗೆ ನೆಟ್ಟಿಗರು ಫಿದಾ

ಪಂಜ:ಹೃದಯಾಘಾತಕ್ಕೆ ಯುವಕ ಬಲಿ

ಸಂಪಾಜೆ ಗ್ರಾಮ ಪಂಚಾಯತ್‌ನಲ್ಲಿ ಬುಗಿಲೆದ್ದ ‘ಕೈ’ ನಾಯಕರ ವಾಕ್ಸಮರ, ಪಂಚಾಯತ್ ಅಧ್ಯಕ್ಷರನ್ನೇ ಶ್ರೀಮಹಾವಿಷ್ಣು ದೈವಸ್ಥಾನಕ್ಕೆ ಕರೆದ ಕಾಂಗ್ರೆಸ್‌ ನಾಯಕ..!