ಕ್ರೈಂ

ಆಟವಾಡುತ್ತಲೇ ಅಪ್ಪ-ಮಗನಿಗೆ ಕಚ್ಚಿದ ಮುದ್ದಿನಿಂದ ಸಾಕಿದ ಬೆಕ್ಕು..!,ಒಂದು ವಾರ ಕಳೆಯುವಷ್ಟರಲ್ಲಿ ತಂದೆ-ಮಗ ದಾರುಣ ಅಂತ್ಯ..!ಏನಿದು ಆಘಾತಕಾರಿ ಘಟನೆ?

244

ನ್ಯೂಸ್ ನಾಟೌಟ್ : ಮುದ್ದಿನಿಂದ ಸಾಕಿದ್ದ ಬೆಕ್ಕೊಂದು ತಂದೆ-ಮಗನಿಗೆ ಕಚ್ಚಿ ತಂದೆ-ಮಗ ದಾರುಣವಾಗಿ ಸಾವನ್ನಪ್ಪಿದ ಘಟನೆಉತ್ತರ ಪ್ರದೇಶದ ಕಾನ್ಪುರದಿಂದ ವರದಿಯಾಗಿದೆ.ತಂದೆ ಮತ್ತು ಮಗ ಡೆಡ್ಲಿ ರೆಬೀಸ್​ಗೆ ದುರಂತ ಸಾವನ್ನಪ್ಪಿರುವ ಘಟನೆಗೆ ಇಡೀ ಸಮಾಜವೇ ಬೆಚ್ಚಿ ಬಿದ್ದಿದೆ.ಕಾನ್ಪುರ ನಗರದ ಅಕ್ಬರ್ ಪುರದಲ್ಲಿ ಮೃತರ ನಿವಾಸದಲ್ಲಿ ಬೆಕ್ಕನ್ನು ಸಾಕಿದ್ದರು.ಇದಕ್ಕೆ ಹುಚ್ಚು ನಾಯಿ ಕಡಿದಿತ್ತು ಎನ್ನಲಾಗಿದೆ.ಹೀಗಾಗಿ ಅದೇ ಬೆಕ್ಕು ತನ್ನ ಮಾಲೀಕರಿಬ್ಬರಿಗೆ ಕಚ್ಚಿತ್ತು. ಕಚ್ಚಿದ ಒಂದು ವಾರದಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಎಂದಿನಂತೆ ಬೆಕ್ಕಿನ ಜೊತೆ ಮನೆಯ ಸದಸ್ಯರು ಆಟವಾಡುತ್ತಿರುವಾಗ ಈ ಅವಘಡ ಸಂಭವಿಸಿದೆ.ಒಂದು ದಿನ ಅದು ತನ್ನ ಮಾಲೀಕನ ಮಗನಿಗೆ ಗಾಯಮಾಡಿತ್ತು.ಕೆಲ ದಿನಗಳ ಬೆನ್ನಲ್ಲೇ ಆತನ ಆರೋಗ್ಯ ಹದಗೆಡಲು ಶುರುವಾಯಿತು.ಚಿಕಿತ್ಸೆ ನೀಡಿದರೂ ಕೊನೆ ಕೊನೆಗೆ ಆತ ಬೆಕ್ಕಿನ ಹಾಗೆಯೇ ವರ್ತಿಸಲು ಶುರುಮಾಡಿದ್ದ.ಚಿಕಿತ್ಸೆ ಫಲಕಾರಿಯಾಗದೇ ಕೊನೆಗೆ ಆತ ಮೃತಪಟ್ಟಿದ್ದ.ಮಗ ಮೃತಪಟ್ಟು ದಿನ ಕಳೆಯುವಷ್ಟರಲ್ಲಿ ತಂದೆಗೂ ಕೂಡ ಅದೇ ಪರಿಸ್ಥಿತಿ ಎದುರಾಯ್ತು. ಅವರೂ ಕೂಡ ರೇಬಿಸ್​​ನಿಂದ ಸಾವನ್ನಪ್ಪಿದರು ಎಂಬ ಮಾಹಿತಿ ಹೊರಬಿದ್ದಿದೆ.

ಈ ಸುದ್ದಿ ಎಲ್ಲೆಡೆ ಹರಿಯಲಾರಂಭಿಸಿದೆ.ಸ್ಥಳೀಯರಿಗೆ ಗೊತ್ತಾಗುತ್ತಿದ್ದಂತೆ ಹೌಹಾರಿದ್ದಾರೆ. ಈ ವಿಷಯ ತಿಳಿದು ಅವರ ಮನೆಗೆ ಯಾರೂ ಭೇಟಿ ನೀಡುತ್ತಿಲ್ಲ.ಸದ್ಯ ಆ ಪ್ರದೇಶದಲ್ಲಿ ಓಡಾಡೋದಕ್ಕೂ ಅಂಜುತ್ತಿದ್ದಾರೆ. ಹಿರಿಯ ವೈದ್ಯಾಧಿಕಾರಿ ಅಮಿತ್ ಕಟಿಯಾರ್.. ನಾವು ಸಾಕಿದ ಪ್ರಾಣಿಗಳಿಗೆ ಆಟಿ ರೇಬಿಸ್​ ಇಂಜೆಕ್ಷನ್​ಗಳನ್ನು ಹಾಕಿಸಲೇಬೇಕು. ಸಾಕು ಪ್ರಾಣಿಗಳು ಮನೆಯ ಸದಸ್ಯರಿಗೆ ಕಚ್ಚಿದರೆ ಕೂಡಲೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳುವುದು ಕಡ್ಡಾಯ ಎಂದಿದ್ದಾರೆ.

See also  ಸುಳ್ಯ: ರಿಕ್ಷಾಗೆ ಗುದ್ದಿದ ಒಳದಾರಿಯಿಂದ ಬಂದ ಸ್ಕೂಟರ್..! ರಿಕ್ಷಾ ಪಲ್ಟಿ..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget