Latestಕರಾವಳಿಕ್ರೈಂಚಿಕ್ಕಮಗಳೂರುಬೆಂಗಳೂರುಮಂಗಳೂರುವೈರಲ್ ನ್ಯೂಸ್

ಪೈಪ್‌ ಲೈನ್‌ ಗೆ ರಂಧ್ರ ಕೊರೆದು ಪೆಟ್ರೋಲ್ ಕಳ್ಳತನ ಮಾಡುತ್ತಿದ್ದ ಅಪ್ಪ-ಮಗ ಅರೆಸ್ಟ್..! ಮಂಗಳೂರಿನಿಂದ ಬೆಂಗಳೂರಿಗೆ ಇಂಧನ ಪೂರೈಸುವ ಪೈಪ್‌ ಲೈನ್..!

1.1k
Pc Cr: Public Tv

ನ್ಯೂಸ್ ನಾಟೌಟ್ : ಪೆಟ್ರೋಲ್ ಪೈಪ್ ಲೈನ್ ರಂಧ್ರ ಕೊರೆದು ಪೆಟ್ರೋಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನ ಮೂಡಿಗೆರೆ ತಾಲೂಕಿ‌ನ ಹಿರೇಶಿಗಿರ ಗ್ರಾಮದ ವಿಜಯ್ ಕುಮಾರ್ ಹಾಗೂ ಹರ್ಷ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ಇಂಧನ ಪೂರೈಸುವ ಪೆಟ್ರೋನೆಟ್ ಕಂಪನಿಯ ಪೈಪ್‌ ಲೈನ್ ಕೊರೆದು ಟಿಪ್ಪರ್ ಲಾರಿಯೊಳಗೆ ಟ್ಯಾಂಕರ್ ಕೂರಿಸಿ ಸುಮಾರು 2 ಸಾವಿರ ಲೀಟರ್ ಪೆಟ್ರೋಲ್ ಕಳ್ಳತನ ಮಾಡಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಈ ಸಂಬಂಧ ಗೋಣಿಬೀಡು ಠಾಣೆಯಲ್ಲಿ ಕಂಪನಿಯ ಮ್ಯಾನೇಜರ್ ದೂರು ದಾಖಲಿಸಿದ ಹಿನ್ನೆಲೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ಪೆಟ್ರೋಲ್ ತುಂಬಿದ ಟ್ಯಾಂಕರ್, ಉಪಕರಣಗಳು ಹಾಗೂ ಕಳ್ಳತನಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಪೈಪ್‌ ಲೈನ್‌ನಲ್ಲಿ ರಂಧ್ರ ಮಾಡಿ ಪೆಟ್ರೋಲ್ ಕಳ್ಳತನ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ. ಘಟನೆ ಬೆಳಕಿಗೆ ಬಂದ ನಂತರ ಪೆಟ್ರೋನೆಟ್ ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಉಚಿತ ಟಿಕೆಟ್‌ ಘೋಷಣೆ ಮಾಡಿದ್ದರಿಂದ ಕಾಲ್ತುಳಿತವಾಗಿದೆ ಎಂದ ಅಮಾನತ್ತಾಗಿರುವ ಐಪಿಎಸ್‌ ಅಧಿಕಾರಿ ದಯಾನಂದ್‌..! ಮುಕ್ತಾಯ ಹಂತಕ್ಕೆ ಬಂದ ವಿಚಾರಣೆ..!

See also  ರಸ್ತೆ ಬದಿಯಲ್ಲಿದ್ದ ಕಾರಿನ ಮೇಲೆ ಉರುಳಿಬಿದ್ದ ಟೊಮ್ಯಾಟೊ ಸಾಗಿಸುತ್ತಿದ್ದ ಲಾರಿ..! ಅವಘಡದ ರಭಸಕ್ಕೆ ಅಪ್ಪಚ್ಚಿಯಾದ ಕಾರು, ಮೂವರ ಸಾವು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget