Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಮೃತ ತಂದೆಯ ದೇಹವನ್ನು ಆಸ್ಪತ್ರೆಯಿಂದ ಮನೆಗೆ ತರುವ ವೇಳೆ ಮಾರ್ಗ ಮಧ್ಯೆ ಮಗನೂ ಸಾವು..! ಇಲ್ಲಿದೆ ಮನಕಲಕುವ ಘಟನೆ..!

992

ನ್ಯೂಸ್ ನಾಟೌಟ್: ಆಸ್ಪತ್ರೆಯಲ್ಲಿ ಮೃತಪಟ್ಟ ತಂದೆಯ ಮೃತದೇಹವನ್ನು ಮನೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಮಗನೂ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಕಾನ್ಪುರದ ನಿವಾಸಿ ಲೈಕ್ ಅಹ್ಮದ್ ಆಸ್ಪತ್ರೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದರು. ಇವರ ದೇಹವನ್ನು ಕೊಂಡೊಯ್ಯುತ್ತಿದ್ದ ವೇಳೆ ಮೃತ ಲೈಕ್ ಅಹ್ಮದ್ ಅವರ ಮಗ ಅತೀಕ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಲೈಕ್ ಅಹ್ಮದ್ ಕಾನ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಕಳೆದ ಮಾರ್ಚ್ 20 ರಂದು ಅರೋಗ್ಯ ಹದಗೆಟ್ಟು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆಸ್ಪತ್ರೆಯ ವೈದ್ಯರು ತಂದೆಯ ಸಾವಿನ ವಿಚಾರವನ್ನು ಮಗ ಅತೀಕ್ ಬಳಿ ಹೇಳಿದ್ದಾರೆ ಆದರೆ ತಂದೆಯನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಮಗ ತಂದೆಯ ಸಾವನ್ನು ಒಪ್ಪಿಕೊಳ್ಳಲು ತಯಾರು ಇರಲಿಲ್ಲ ಹಾಗಾಗಿ ತನ್ನ ತಂದೆಯನ್ನು ಪರೀಕ್ಷಿಸಲು ಹತ್ತಿರದ ಇನ್ನೊಂದು ಆಸ್ಪತ್ರೆಗೆ ಕೊಂಡೊಯ್ದಿದ್ದಾನೆ.

ಅಲ್ಲಿ ವೈದ್ಯರ ಬಳಿ ತಂದೆಯನ್ನು ಸರಿಯಾಗಿ ಪರಿಶೀಲಿಸುವಂತೆ ಕೇಳಿಕೊಂಡಿದ್ದಾನೆ. ಅದರಂತೆ ಪರಿಶೀಲಿಸಿದ ವೈದ್ಯರು ವ್ಯಕ್ತಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ, ಇದರಿಂದ ಆಘಾತಕ್ಕೆ ಒಳಗಾದ ಮಗ ವಿಷಯ ಮನೆಯವರಿಗೆ ತಿಳಿಸಿ ಬಳಿಕ ಅಂಬ್ಯುಲೆನ್ಸ್ ಮೂಲಕ ಮೃತದೇಹವನ್ನು ಸಾಗಿಸಿದ್ದು ಇದರ ಹಿಂದೆ ಮಗ ಅತೀಕ್ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬರುತ್ತಿದ್ದ ಎನ್ನಲಾಗಿದೆ. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾನೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ದುರದೃಷ್ಟವಶಾತ್ ಪರಿಶೀಲಿಸಿದ ವೈದ್ಯರು ಅತೀಕ್ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಇತ್ತ ತಂದೆಯ ಮೃತದೇಹ ಮನೆಗೆ ಬರುವ ಮೊದಲೇ ಮಗನೂ ಹೃದಯಾಘಾತಗೊಂಡು ಮೃತಪಟ್ಟಿದ್ದು, ತಂದೆ ಮತ್ತು ಮಗನ ಅಂತ್ಯಕ್ರಿಯೆಯನ್ನು ಒಟ್ಟಿಗೆ ನಡೆಸಲಾಯಿತು.  

ಇದನ್ನೂ ಓದಿ: ಯೂಟ್ಯೂಬ್‌ ನೋಡಿ ಹೊಟ್ಟೆ ಆಪರೇಷನ್‌ ಮಾಡಿಕೊಂಡ ವ್ಯಕ್ತಿ ಬದುಕಿದ್ದೇ ಪವಾಡ..! ಆತನ ಕಿರುಚಾಟ ಕೇಳಿ ಓಡಿ ಬಂದ ಜನ..!

See also  ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ, ಡಿ.ವಿ ಸದಾನಂದ ಗೌಡ ಹೀಗೆ ಹೇಳಿದ್ಯಾಕೆ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget