ಕ್ರೈಂಬೆಂಗಳೂರುವೈರಲ್ ನ್ಯೂಸ್

ಮಗಳ ಮೇಲೆ ಅತ್ಯಾಚಾರ ಮಾಡಿ ಗರ್ಭವತಿಯನ್ನಾಗಿಸಿದ ತಂದೆ..! 20 ವರ್ಷ ಜೈಲು ಶಿಕ್ಷೆ 10 ಸಾವಿರ ರೂ. ದಂಡ ಪ್ರಕಟಿಸಿದ ನ್ಯಾಯಾಧೀಶೆ

ನ್ಯೂಸ್ ನಾಟೌಟ್: ಹುಟ್ಟಿಸಿದ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ ಪಾಪಿ ತಂದೆಗೆ 20 ವರ್ಷ ಜೈಲು ಶಿಕ್ಷೆ (20 years of sentence) ವಿಧಿಸಲಾಗಿದೆ. ಆತ ಆ ಪುಟ್ಟ ಬಾಲಕಿಯ ಮೇಲೆ (POCSO Case) ಪೈಶಾಚಿಕವಾಗಿ ಅತ್ಯಾಚಾರ (Sexual harassment on daughter) ಮಾಡಿದ್ದಾನೆ. ಮಾತ್ರವಲ್ಲ ಆಕೆ ಗರ್ಭ ಧರಿಸುವಂತೆ ಮಾಡಿ ಈಗ ಜೈಲು ಸೇರಿದ್ದಾನೆ.

ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 2022ರಲ್ಲಿ ಈ ಘಟನೆ ನಡೆದಿದೆ. ಪತ್ನಿ ಮನೆಯಲ್ಲಿಲ್ಲದ ಸಮಯ ನೋಡಿ ಅಮಾಯಕ ಮಗಳನ್ನು ಆ ಧೂರ್ತ ತಂದೆ ಲೈಂಗಿಕವಾಗಿ ಹಿಂಸಿಸುತ್ತಿದ್ದ. ಯಾರಿಗಾದರೂ ಹೇಳಿದರೆ ಕೊಲೆ ಮಾಡುವ, ಅವರಿಗೆ ಹಿಂಸೆ ಕೊಡುವ ಬೆದರಿಕೆಗಳನ್ನು ಒಡ್ಡಿ ಆಕೆಯನ್ನು ತನಗೆ ಬೇಕಾದ ಹಾಗೆ ಬಳಸಿಕೊಂಡಿದ್ದ ಎನ್ನಲಾಗಿದೆ. ಹೆತ್ತ ತಂದೆಯಿಂದಲೇ ದೌರ್ಜನ್ಯಕ್ಕೆ ಒಳಗಾದ ಆ ಬಾಲಕಿ ಗರ್ಭ ಧರಿಸಿದ್ದಳು.

ಆಗ ಈ ವಿಚಾರ ಹೊರಜಗತ್ತಿಗೆ ತಿಳಿದಿತ್ತು. ಬಳಿಕ ಸಂಬಂಧಿಕರು ಬಾಲಕಿಯನ್ನು ರಕ್ಷಿಸಿದರು. ವಿಷಯ ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದ ಬಳಿಕ ಕಾಮಾಕ್ಷಿಪಾಳ್ಯ ಪೊಲೀಸರು ಘಟನೆ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಎನ್ ಲೋಹಿತ್ ತನಿಖೆ ನಡೆಸಿ ಐದನೇ ಅಧಿಕ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ) ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದರು.

ನ್ಯಾಯಾಧೀಶರಾದ ಎನ್ ನರಸಮ್ಮ ಅವರು ಇದೀಗ ಪ್ರಕರಣದ ವಿಚಾರಣೆ ನಡೆಸಿ ಅಂತಿಮ ತೀರ್ಪು ಪ್ರಕಟಿಸಿದ್ದಾರೆ. ನ್ಯಾಯಾಧೀಶರು ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದರು. ನೊಂದ ಬಾಲಕಿಗೆ ಜಿಲ್ಲಾ ಮತ್ತು ಕಾನೂನು ಪ್ರಾಧಿಕಾರದಿಂದ ಏಳು ಲಕ್ಷ ಪರಿಹಾರ ನೀಡುವಂತೆ ಶಿಫಾರಸು ಮಾಡಲಾಗಿದೆ.

Related posts

ಜಾತಿ ನಿಂದನೆ ಪ್ರಕರಣ: ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅರೆಸ್ಟ್

ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರು ಅನಾವರಣ, ಇಲ್ಲಿದೆ ಸಂಪೂರ್ಣ ಮಾಹಿತಿ

ಸನಾತನ ಧರ್ಮವನ್ನು ಕೊನೆವರೆಗೂ ವಿರೋಧಿಸುತ್ತೇನೆ ಎಂದ ಉದಯನಿಧಿ ಸ್ಟಾಲಿನ್‌ ! ತನ್ನ ಹೇಳಿಕೆ ಸಮರ್ಥಿಸಿಕೊಳ್ಳುವುದರ ಹಿಂದಿದೆಯಾ ಆ ಒಂದು ಕಾರಣ?