Latestಕ್ರೈಂರಾಜ್ಯ

ತಂದೆಯನ್ನು ಕೊಂದು ಸ್ವಿಚ್ ಬೋರ್ಡ್ ಗೆ ಬೆರಳು ತಾಗಿಸಿ ಶಾರ್ಟ್ ಸರ್ಕ್ಯೂಟ್ ಎಂದು ಕಥೆ ಕಟ್ಟಿದ್ದ ಮಗ..! ಐಸ್ ಕ್ರಿಂ ತಯಾರಿಕ ಘಟಕದಲ್ಲಿ ನಡೆಯಿತು ಭೀಕರ ಕೃತ್ಯ..!

921

ನ್ಯೂಸ್‌ ನಾಟೌಟ್‌: ಸರ್ಕ್ಯೂಟ್ ನಿಂದಾಗಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ದೊರೆತಿದ್ದು, ಸ್ವಂತ ಮಗನೇ ತನ್ನ ತಂದೆಯನ್ನು ಕೊಂದು ಬಳಿಕ ಅದನ್ನು ಶಾರ್ಟ್ ಸರ್ಕ್ಯೂಟ್ ಎಂದು ಬಿಂಬಿಸಿದ್ದ ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಮೇ 11 ರಂದು ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ‘ಶಾಮೀರ್ ಆಸ್ಪತ್ರೆ’ ಮುಂಭಾಗದ ಐಸ್ ಕ್ರಿಂ ತಯಾರಿಕ ಘಟಕದಲ್ಲಿ ಮಾಲೀಕ ನಾಗೇಶ್ ಎಂಬವರು ಮೃತಪಟ್ಟಿದ್ದರು. ಮೇಲ್ನೋಟಕ್ಕೆ ಇದು ಶಾರ್ಟ್ ಸರ್ಕ್ಯೂಟ್ ಸಾವು ಎಂದು ಹೇಳಲಾಗಿತ್ತು. ಆದರೆ ಬಳಿಕ ಈ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಸ್ಫೋಟಕ ಮಾಹಿತಿ ಬಹಿರಂಗ ಮಾಡಿದ್ದು, ನಾಗೇಶ್ ರನ್ನು ಅವರ ಮಗನೇ ಕೊಂದು ಹಾಕಿದ್ದ ವಿಚಾರ ಬಯಲಾಗಿದೆ.

ಐಸ್ ಕ್ರಿಂ ತಯಾರಿಕ ಘಟಕದಲ್ಲಿ ಭಾನುವಾರ ಮಾಲೀಕ ನಾಗೇಶ್ ಮೃತಪಟ್ಟಿದ್ದು, ಸಂಬಂಧಿಗಳು ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಿ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.

ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಪೊಲೀಸರಿಗೆ ನಾಗೇಶ್‌ ಮಗ ಸೂರ್ಯ (19) ಮತ್ತು ಸ್ನೇಹಿತ ಸೇರಿ ಕೊಲೆ ಮಾಡಿರುವ ದಾಖಲೆಗಳು ಲಭ್ಯವಾಗಿವೆ. ಪ್ರಸ್ತುತ ಮಗ ಸೂರ್ಯ ಮತ್ತು ಸ್ನೇಹಿತ ಪರಾರಿಯಾಗಿದ್ದು ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಇನ್ನು ಪೊಲೀಸರು ಸಂಗ್ರಹಿಸಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಘಟನೆ ನಡೆದ ದಿನ 55 ವರ್ಷದ ನಾಗೇಶ್ ತನ್ನ ಮಗನಿಗೆ ಕಪಾಳಮೋಕ್ಷ ಮಾಡಿದ್ದರು. ಅಲ್ಲದೆ ಚಪ್ಪಲಿ ತೆಗೆದು ಅದರಿಂದ ಮಗ ಸೂರ್ಯನಿಗೆ ಹೊಡೆದಿದ್ದಾರೆ. ನಂತರ ನಾಗೇಶ್ ಸೂರ್ಯನನ್ನು ಹೊಡೆಯಲು ಕೋಲನ್ನು ಎತ್ತಿಕೊಳ್ಳುತ್ತಾರೆ. ಈ ವೇಳೆ ಮಗ ಸೂರ್ಯ ತನ್ನ ತಂದೆಯನ್ನು ತಡೆಯಲು ಪ್ರಯತ್ನಿಸುತ್ತಾನೆ.
ಬಳಿಕ ಜಗಳ ಜೋರಾಗಿ ಮಗನೇ ಬಿಳಿ ಬಟ್ಟೆಯಿಂದ ತಂದೆಯ ಕುತ್ತಿಗೆಗೆ ಬಿಗಿದು ಕೊಂದು ಹಾಕುತ್ತಾನೆ. ಈ ವೇಳೆ ಸೂರ್ಯನ ಸ್ನೇಹಿತ ಕೂಡ ಅಲ್ಲಿಯೇ ಇದ್ದು ಬಳಿಕ ಶವವನ್ನು ಹಾಸಿಗೆ ಮೇಲೆ ಇರಿಸಿ ಅವರ ಬೆರಳುಗಳನ್ನು ಸ್ವಿಚ್ ಬೋರ್ಡ್ ಗೆ ತಾಗಿಸಿ ಶಾಕ್ ಹೊಡೆಸಿದ್ದಾರೆ. ಕೊಲೆ ಆರೋಪಿ ಸೂರ್ಯನನ್ನು ಬಂಧಿಸಿದ್ದು, ಆತನಿಗೆ ನೆರವು ನೀಡಿದ ಸ್ನೇಹಿತ ಪರಾರಿಯಲ್ಲಿದ್ದಾನೆ. ಅವನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.

ಉಗ್ರ ಮಸೂದ್ ಅಜರ್‌ ಗೆ 14 ಕೋಟಿ ರೂ. ಪರಿಹಾರ ಘೋಷಿಸಿದ ಪಾಕ್..! ಆಪರೇಷನ್ ಸಿಂಧೂರದಲ್ಲಿ ಮಸೂದ್ ಅಜರ್ ನ ಕುಟುಂಬಸ್ಥರ ಸಾವು ಹಿನ್ನೆಲೆ..!

See also  ಉಪ್ಪಿನಂಗಡಿ: ಸಿಬಿಐ ಆಫೀಸರ್ ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ..! ಮಗನ ಹೆಸರು ಹೇಳಿ ವ್ಯಕ್ತಿಯಿಂದ ಹಣ ಸುಳಿಗೆಗೆ ಯತ್ನ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget