ಕ್ರೈಂಬೆಂಗಳೂರುರಾಜ್ಯವೈರಲ್ ನ್ಯೂಸ್

ಅಪ್ಪ-ಅಮ್ಮನ ಜಗಳ ಬಿಡಿಸಲು ಹೋದ ಮಗನಿಗೆ ಚೂರಿ ಇರಿತ..! ಇನ್‌ಫೋಸಿಸ್‌ ಕಂಪನಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್ ಆಗಿದ್ದ ಯಶವಂತ್

ನ್ಯೂಸ್ ನಾಟೌಟ್: ಇನ್‌ಫೋಸಿಸ್‌ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಮಗ, ತಂದೆ- ತಾಯಿಯ ಜಗಳ ಬಿಡಿಸಲು ಹೋಗಿ ಕೊಲೆಯಾಗಿದ್ದಾನೆ ಎಂದು ವರದಿ ತಿಳಿಸಿದೆ. ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಜರಗನಹಳ್ಳಿಯಲ್ಲಿ ಇಂದು(ಜೂ.೫) ಬೆಳಗ್ಗೆ 10 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ಯಶವಂತ್ (23) ತಂದೆಯಿಂದಲೇ ಕೊಲೆಯಾಗಿದ್ದಾನೆ ಎನ್ನಲಾಗಿದ್ದು, ಸರ್ಜಾಪುರ ಸಮೀಪದ ಮ್ಯಾಟ್ರಿಕ್ಸ್ ಎಂಬ ಕಂಪನಿಯಲ್ಲಿ ಯಶವಂತ್‌ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ. ಮೃತನ ಅಜ್ಜಿ ಕಾಯಿಲೆ ಬಿದ್ದು ಹಾಸಿಗೆ ಹಿಡಿದಿದ್ದು, ಆಕೆಯನ್ನು ನೋಡಿಕೊಳ್ಳುವ ವಿಚಾರಕ್ಕೆ ಆಗಾಗ ಜಗಳ ಆಗುತ್ತಿತ್ತು. ಬೆಳಗ್ಗೆಯೂ ಇದೇ ವಿಚಾರಕ್ಕಾಗಿ ಅಪ್ಪ ಅಮ್ಮನ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಜಗಳ ಬಿಡಿಸಲು ಹೋದ ಮಗನನ್ನು ಹೆದರಿಸಲು ತಂದೆ ಅಡುಗೆ ಮನೆಯಿಂದ ಚಾಕು ತಂದು ಇರಿಯಲು ಹೋಗಿದ್ದಾನೆ.

ಚಾಕು ಯುವಕನ ಎದೆಗೆ ಆಳವಾಗಿ ನಾಟಿ ಪ್ರಾಣ ಹೋಗಿದೆ ಎನ್ನಲಾಗಿದೆ. ಯಶವಂತ ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಎಂಜಿನಿಯರ್ ವೃತ್ತಿ ಮಾಡುತ್ತ, ತಂದೆ ಮಾಡಿದ್ದ ಸಾಲ ಸಹ ತೀರಿಸುತ್ತಿದ್ದ. ನೇತ್ರದಾನ ಸಹ ಮಾಡಿದ್ದ. ಆತನ ಆಸೆಯಂತೆ ಕುಟುಂಬಸ್ಥರು‌ ಯಶವಂತನ ಕಣ್ಣುಗಳನ್ನು ದಾನ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Click 👇

https://newsnotout.com/2024/06/congress-meeting-and-govt-forming-issue
https://newsnotout.com/2024/06/narendra-modi-and-oath-taking-date-fix
https://newsnotout.com/2024/06/meloni-modi-wish-by-meloni-itali-to-narendra-modi

Related posts

ಉಪ್ಪಿನಂಗಡಿ: ಮೀನಿನ ವ್ಯಾಪಾರಿಗೆ ಹಲ್ಲೆ ಪ್ರಕರಣ: 7ಮಂದಿ ಆರೋಪಿಗಳಿಗೆ ಜಾಮೀನು

10 ವರ್ಷದ ಹುಡುಗನ ಕೈಯಿಂದ ಒಂದು ವರ್ಷದ ಮಗುವನ್ನು ಅಪಹರಿಸಿದ ಅಪರಿಚಿತ..! ಕುಡಿದ ಮತ್ತಿನಲ್ಲಿ ಘಟನೆ ನಡೆದಿರುವ ಶಂಕೆ..!

ಸಂಚಾರಿ ಪೊಲೀಸರ ಹೆಸರಿನಲ್ಲಿ ದಂಡ ಕಟ್ಟಲು ಕರೆ ಬಂದರೆ ಎಚ್ಚರ..! ಈ ಬಗ್ಗೆ ಪೊಲೀಸ್‌ ಆಯುಕ್ತರು ಹೇಳಿದ್ದೇನು..?