ಕ್ರೈಂವೈರಲ್ ನ್ಯೂಸ್

ಠಾಣೆ ಮೆಟ್ಟಿಲೇರಿದ 4ನೇ ತರಗತಿ ಬಾಲಕಿ! ಕಣ್ಣೀರಿಡುತ್ತಾ ಅಪ್ಪನ ವಿರುದ್ಧ ದೂರು ನೀಡಿದ ಮಗಳು! ಆ ದೂರಿನಲ್ಲೇನಿತ್ತು!

211

ನ್ಯೂಸ್ ನಾಟೌಟ್: ಅಪ್ಪ ಕುಡಿದು ಬಂದು ಅಮ್ಮನನ್ನೂ ನನ್ನನ್ನೂ ಪ್ರತಿದಿನವೂ ಹೊಡೆಯುತ್ತಾರೆ ಎಂದು 4 ನೇ ತರಗತಿ ಓದುತ್ತಿರುವ ಬಾಲಕಿಯೊಬ್ಬಳು ತನ್ನ ತಂದೆ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಆಶ್ಚರ್ಯಕರ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಬಾನುವಾರ ನಡೆದಿದೆ.
ಬಾಲಕಿ ಪೊಲೀಸ್ ಠಾಣೆಗೆ ದಾವಿಸಿ, ಕಣ್ಣೀರಿಡುತ್ತಾ ಪ್ರತಿದಿನ ತನ್ನ ತಂದೆ ನೀಡುತ್ತಿರುವ ಕಿರುಕುಳದ ಬಗ್ಗೆ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ ಎಂದು ವರದಿ ತಿಳಿಸಿದೆ.
ಕಾಮರೆಡ್ಡಿ ಜಿಲ್ಲೆಯ ಬಿರ್ಕೂ ರಾಮಮಂಡಲ ಕೇಂದ್ರದ ಲತೀಫ್ ಮತ್ತು ಗೌಶ್ಯ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ.

ಆದರೆ ಇಬ್ಬರು ಹೆಣ್ಣುಮಕ್ಕಳನ್ನು ಮದುವೆ ಮಾಡಿ ಅತ್ತೆಯ ಮನೆಗೆ ಕಳುಹಿಸಲಾಗಿದೆ. ಕಿರಿಯ ಮಗಳು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ. ಕೂಲಿ ಕೆಲಸ ಮಾಡುವ ಲತೀಫ್ ಪ್ರತಿ ದಿನ ಕುಡಿದು ಬಂದು ತನ್ನ ಹೆಂಡತಿ ಮತ್ತು ಪುಟ್ಟ ಮಗಳ ಮೇಲೆ ಹಲ್ಲೆ ಮಾಡುತ್ತಿದ್ದಾನೆ. ಪರಿಣಾಮ ಫಾತಿಮಾ ಎಂಬ ಬಾಲಕಿ ತನ್ನ ತಂದೆ ಲತೀಫ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಠಾಣೆಯಲ್ಲಿ ಲತೀಫ್​ಗೆ ಬುದ್ದಿ ಹೇಳಿರುವ ಪೊಲೀಸರು, ಇನ್ಮುಂದೆ ನಿಮ್ಮ ತಂದೆ ಹೊಡೆಯುವುದನ್ನು ಮುಂದುವರಿಸಿದರೆ 100 ನಂಬರ್​ಗೆ ಕರೆ ಮಾಡು, ನಾವು ಬರುತ್ತೇವೆ ಎಂದು ದೈರ್ಯ ತುಂಬಿ ಬಾಲಕಿಯನ್ನು ಕಳುಹಿಸಿದ್ದಾರೆ ಎನ್ನಲಾಗಿದೆ.

See also  ಚಪ್ಪಲಿ ಹಾರ ಹಾಕಿಕೊಂಡು ಮತಯಾಚಿಸಿದ ಭೂಪ! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget   Ad Widget