ಕರಾವಳಿಚಿಕ್ಕಮಗಳೂರು

ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ,ಗಂಭೀರ ಗಾಯಗೊಂಡ ವೈದ್ಯ ಆಸ್ಪತ್ರೆಗೆ ದಾಖಲು;ಆರೋಗ್ಯ ವಿಚಾರಿಸಿದ ಸಚಿವ ದಿನೇಶ್ ಗುಂಡೂರಾವ್

ನ್ಯೂಸ್ ನಾಟೌಟ್: ವೈದ್ಯನ ಮೇಲೆ ಮಾರಣಾಂತಿಕ ಹ*ಲ್ಲೆಯಾದ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ.ಚಾಕುವಿನಿಂದ ಕೈ ಹಾಗೂ ಹೊಟ್ಟೆ ಭಾಗಕ್ಕೆ ದುಷ್ಕರ್ಮಿಗಳು ಹ*ಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ಘಟನೆಯಲ್ಲಿ ಅದೃಷ್ಟವಶಾತ್ ಅಪಾಯದಿಂದ ವೈದ್ಯ ಪಾರಾಗಿದ್ದಾರೆ.

ಬಾಳೆಹೊನ್ನೂರಿನ ವೈದ್ಯರಾದ ಗಣೇಶ್ ಎಂಬವರ ಮೇಲೆ ಮಾರಣಾಂತಿಕ ಹ*ಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.ವೈದ್ಯ ಗಣೇಶ್ ತೋಟದ ಕಾರ್ಮಿಕರ ಮೇಲೆ ಹಲ್ಲೆ ನಡೆದಿತ್ತು. ಪಕ್ಕದ ತೋಟದ ಕಾರ್ಮಿಕರಿಂದ ವೈದ್ಯ ಗಣೇಶ್ ತೋಟದ ಕಾರ್ಮಿಕರ ಮೇಲೆ ಹ*ಲ್ಲೆ ನಡೆದಿತ್ತು.ಈ ವೇಳೆ ಕಾರ್ಮಿಕರ ಮೇಲೆ‌ ಹ*ಲ್ಲೆಗೈದ ಕಾರ್ಮಿಕರಿಂದ ವೈದ್ಯನ ಮೇಲೂ ಹ*ಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ತೀವ್ರ ಅಸ್ವಸ್ಥರಾಗಿದ್ದ ವೈದ್ಯ ಗಣೇಶ್ ಸರ್ಕಾರಿ ಆಸ್ಪತ್ರೆಗೆ ದಾಖಲಾದರು.ಈ ಸಂದರ್ಭ ಸಚಿವ ದಿನೇಶ್ ಗುಂಡೂರಾವ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಆರೋಗ್ಯವನ್ನು ವಿಚಾರಿಸಿದ್ದಾರೆ.ಘಟನೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಪುತ್ತೂರು: ‘ಬುರ್ಖಾ ತೆಗೆದು ಒಳಗೆ ಬನ್ನಿ’, ಸರ್ಕಾರಿ ಆಸ್ಪತ್ರೆಯಲ್ಲಿ ವಿವಾದಾತ್ಮಕ ಬೋರ್ಡ್ ಹಾಕಿದ್ದು ಯಾರು..?

ಧರ್ಮಸ್ಥಳಕ್ಕೆ ಪುಸಲಾಯಿಸಿ ಕರೆಯಿಸಿಕೊಂಡಿದ್ದ, ವಿವಿಧ ಕಡೆ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಅಪರಾಧಿಗೆ 10 ವರ್ಷ ಜೈಲು, 2 ವರ್ಷದ ಬಳಿಕ ಸಂತ್ರಸ್ತೆಗೆ ಸಿಕ್ಕಿತು ನ್ಯಾಯ..!

ಚೊಕ್ಕಾಡಿ ಪ್ರೌಢ ಶಾಲೆಯಲ್ಲಿ 50ನೇ ವರ್ಷದ ಸಂಭ್ರಮಾಚರಣೆಗೆ ತಯಾರಿ, ಎಸ್ ಅಂಗಾರ ನೇತೃತ್ವದಲ್ಲಿ ಪೂರ್ವ ಸಿದ್ಧತೆ, ಸಮಿತಿ ರಚನೆ, ಸಮಾಲೋಚನಾ ಸಭೆ