ಜೀವನ ಶೈಲಿ/ಆರೋಗ್ಯವೈರಲ್ ನ್ಯೂಸ್ಸಿನಿಮಾ

ಕೇವಲ 30 ವರ್ಷಕ್ಕೆ ಮಾರಕ ಕ್ಯಾನ್ಸರ್ ಗೆ ಬಲಿಯಾದ ಫ್ಯಾಷನ್ ಲೋಕದ ಚೆಲುವೆ..! ಕಣ್ಣೀರಾದ ಕುಟುಂಬ

253

ನ್ಯೂಸ್ ನಾಟೌಟ್: ಫ್ಯಾಷನ್ ಲೋಕದ ಚೆಲುವೆ ಫ್ಯಾಷನ್ ಇನ್‌ ಫ್ಲುಯೆನ್ಸರ್ ಸುರಭಿ ಜೈನ್ ಕೇವಲ 30 ವರ್ಷಕ್ಕೆ ಮಾರಕ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. ಅವರ ನಿಧನದ ಸುದ್ದಿಯನ್ನು ಕುಟುಂಬಸ್ಥರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸುರಭಿ ಜೈನ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಖ್ಯೆಯಲ್ಲಿ ಹಿಂಬಾಲಕರನ್ನು ಹೊಂದಿದ್ದರು.

ಅಂತಹ ಸುರಭಿ ಜೈನ್‌ ಕೆಲವು ಸಮಯಗಳಿಂದ ಕ್ಯಾನ್ಸರ್‌ ನಿಂದ ಬಳಲುತ್ತಿದ್ದರು. ಅಂಡಾಶಯದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಕ್ಯಾನ್ಸರ್‌ ಗೆ ಸಂಬಂಧಿಸಿದಂತೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫೋಟೋವನ್ನು ಹಂಚಿಕೊಂಡು ಆರೋಗ್ಯದ ಬಗ್ಗೆ ಇತ್ತೀಚೆಗೆ ಅಪ್ಡೇಟ್‌ ನ್ನು ಹಂಚಿಕೊಂಡಿದ್ದರು. ಸುರಭಿ ಜೈನ್ ಎಂಟು ವಾರಗಳ ಹಿಂದೆ ಆಸ್ಪತ್ರೆಯಲ್ಲಿ ತನ್ನ ಚಿತ್ರವನ್ನು ಹಂಚಿಕೊಂಡಿದ್ದಳು. ಗುರುವಾರ ಅವರು ನಿಧನರಾಗಿದ್ದು ಶುಕ್ರವಾರ(ಏ.19 ರಂದು) ಗಾಜಿಯಾಬಾದ್ ನಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು ಎಂದು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಸುರಭಿ ಅವರಿಗೆ ಎರಡನೇ ಬಾರಿ ಕ್ಯಾನ್ಸರ್‌ ತಗುಲಿದೆ. ಈ ಹಿಂದೆ 27 ನೇ ವಯಸ್ಸಿನಲ್ಲಿ ಕ್ಯಾನ್ಸರ್‌ ಪತ್ತೆಯಾಗಿತ್ತು. ಅದಕ್ಕೆ ಅವರು ಶಸ್ತ್ರ ಚಿಕಿತ್ಸೆಯನ್ನು ಪಡೆದಿದ್ದರು.

See also  ಪಕ್ಕದ ಮನೆಯಾತನಿಂದ ಕಿರುಕುಳ..! ಡೆತ್ ನೋಟ್ ಬರೆದಿಟ್ಟು ಅಪ್ರಾಪ್ತ ಬಾಲಕಿ ನೇಣಿಗೆ ಶರಣು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget