ಚಿಕ್ಕಮಗಳೂರು

ತನ್ನ ಬದುಕನ್ನೇ ಕತ್ತಲು ಮಾಡಿಕೊಂಡ ರೈತ ಮಹಿಳೆ,ಬೆಳೆ ಬೆಳೆಯುತ್ತಾ ಆರಾಮವಾಗಿ ಜೀವನ ಸಾಗಿಸುತ್ತಿದ್ದ ಮಹಿಳೆಗೆ ಆಗಿದ್ದೇನು?

ನ್ಯೂಸ್ ನಾಟೌಟ್ : ಸಾಲಬಾಧೆ ತಾಳಲಾರದೆ ರೈತ ಮಹಿಳೆ ತನ್ನ ಬದುಕನ್ನೇ ಕತ್ತಲಾಗಿಸಿದ ಘಟನೆ ವರದಿಯಾಗಿದೆ.ಮಹಿಳೆ ಕೆರೆಗೆ ಹಾರಿ ಈ ಕೃತ್ಯವೆಸಗಿದ್ದಾರೆಂದು ತಿಳಿದು ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ರಂಗೇನಹಳ್ಳಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದ್ದು,ಮಳೆ ಕೈಕೊಟ್ಟ ಹಿನ್ನೆಲೆ ಬೆಳೆ ನಾಶದಿಂದ ಮನನೊಂದು ಈ ದುರಂತ ಸಂಭವಿಸಿದೆ.75 ವರ್ಷದ ಹನುಮಮ್ಮ ದುರಂತ ಅಂತ್ಯ ಕಂಡಿರುವ ಮಹಿಳೆ ಎಂದು ತಿಳಿದು ಬಂದಿದೆ.

ಇವರು ಮೂರುವರೆ ಎಕರೆಯಲ್ಲಿ ಜೋಳ-ರಾಗಿ ಬೆಳೆದಿದ್ದರು ಹಾಗೂ ಬ್ಯಾಂಕ್ ನಲ್ಲಿ 6 ಲಕ್ಷ ಸಾಲವನ್ನೂ ಮಾಡಿದ್ದರೆಂದು ತಿಳಿದು ಬಂದಿದೆ. ಮಳೆ ಕೈಕೊಟ್ಟ ಹಿನ್ನೆಲೆ ಬೆಳೆ ನಷ್ಟವಾಗಿದೆ.ಮುಂದೇನು ಎಂಬ ಚಿಂತೆ ಕಾಡಿದೆ.ಹೀಗಾಗಿ ತಿಂಗಳ ಕಂತು ಪಾವತಿಸಲಾಗದೇ ಮನನೊಂದು ಈ ಕೃತ್ಯವೆಸಗಿದ್ದಾರೆ.ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮಲೆನಾಡಿನಲ್ಲಿ ಮತ್ತೆ ಕಾಣಿಸಿಕೊಂಡ ಮಂಗನ ಕಾಯಿಲೆ..! ಕಳೆದ ವರ್ಷ 132 ಜನರಿಗೆ ಬಾಧಿಸಿದ್ದ ಖಾಯಿಲೆ 4 ಜನರನ್ನು ಬಲಿ ಪಡೆದಿತ್ತು..!

ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ,ಗಂಭೀರ ಗಾಯಗೊಂಡ ವೈದ್ಯ ಆಸ್ಪತ್ರೆಗೆ ದಾಖಲು;ಆರೋಗ್ಯ ವಿಚಾರಿಸಿದ ಸಚಿವ ದಿನೇಶ್ ಗುಂಡೂರಾವ್

ರಸ್ತೆ ಕಾಮಗಾರಿ ವೇಳೆ ಏಕಾಏಕಿ ಕುಸಿದು ಬಿದ್ದ ಮಣ್ಣು..!ಮಣ್ಣಿನಡಿ ಸಿಲುಕಿದ ನಾಲ್ವರು ಕಾರ್ಮಿಕರು,ಓರ್ವ ದುರಂತ ಅಂತ್ಯ